ಸಾರ್ವಜನಿಕರ ಅನುಕೂಲಕ್ಕೆ ಅರವಟ್ಟಿಗೆ ವ್ಯವಸ್ಥೆ

Aravatti system for the benefit of the public
ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಪಟ್ಟಣ ಪಂಚಾಯಿತಿಯಿಂದ ಸಾರ್ವಜನಿಕರಿಗೆ ಅರವಟ್ಟಿಗೆ ಸ್ಥಾಪಿಸಲಾಯಿತು. ಪಪಂ ಅಧ್ಯ ಡಾ. ಮಳಸಿದ್ದಪ್ಪ ಮೇತ್ರಿ, ಪ್ರಕಾಶ ಮನಗೂಳಿ, ಪ್ರದಿಪ್​ ಜಾನಕರ, ಭಾಗ್ಯರಾಜ ಸೊನ್ನದ ಇದ್ದರು.
Published on

ಬಸವನಬಾಗೇವಾಡಿ: ತಾಲೂಕಿನ ಮನಗೂಳಿಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಜನರ ಕುಡಿಯುವ ನೀರಿನ ದಾಹ ನೀಗಿಸಲು ಪ್ರಮುಖ ಸ್ಥಳಗಳಲ್ಲಿ ಅರವಟ್ಟಿಗೆ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಮನಗೂಳಿ ಪಟ್ಟಣದ ಬಸ್​ ನಿಲ್ದಾಣ, ಗಣಪತಿ ಗುಡಿ, ಉಕ್ಕಲಿ ರಸ್ತೆ, ಪೊಲೀಸ್​ ಠಾಣೆ, ಸೋಮೇಶ್ವರ ಭಜನಾಮಂಟಪ, ಡಾ.ಬಿ.ಆರ್​. ಅಂಬೇಡ್ಕರ್​ ವೃತ್ತ, ಡಾ. ಎ.ಪಿ.ಜೆ. ಅಬ್ದುಲ್​ ಕಲಾಂ ವೃತ್ತ ಸಾರ್ವಜನಿಕರ ಆಸ್ಪತ್ರೆ ಸೇರಿ ಅನೇಕ ಜನದಟ್ಟನೆ ಹಾಗೂ ವಿವಿಧ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಲಾಯಿತು.

ಪಪಂ ಅಧ್ಯ ಡಾ. ಮಳಸಿದ್ದಪ್ಪ ಮೇತ್ರಿ ಮಾತನಾಡಿ, ಈ ವರ್ಷ ಬೇಸಿಗೆ ಬಿಸಿಲು ಹೆಚ್ಚಿರುವುದರಿಂದ ಸಾರ್ವಜನಿಕರ ಅನಕೂಲಕ್ಕಾಗಿ ಪ್ರಮುಖ ಸ್ಥಳಗಳಲ್ಲಿ ಅರವಟ್ಟಿಗೆ ಸ್ಥಾಪಿಸಲಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಕಾಶ ಮನಗೂಳಿ, ಪ್ರದಿಪ್​ ಜಾನಕರ, ಭಾಗ್ಯರಾಜ ಸೊನ್ನದ, ರಮೇಶ ಪಿರಾಗಾ, ತಿಪ್ಪಣ್ಣ ಖ್ಯಾತನವರ, ಮುಖ್ಯಾಧಿಕಾರಿ ಶಬ್ಬೀರ್​ ರೇವುರಕರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net