ಭಕ್ತರಿಗೆ ತಂಪು ಪಾನೀಯ ವಿತರಿಸಿದ ಅಂಜುಮನ್​ ಸಮಿತಿ

Anjuman Samiti distributed cold drinks to devotees
ಮುಳಸಾವಳಗಿಯಲ್ಲಿ ಜರುಗಿದ ಶ್ರೀ ಶೈಲ ಮಲ್ಲಿಕಾರ್ಜುನ ಐದೇಶಿ ಜಾತ್ರೆಯಲ್ಲಿ ಭಕ್ತರಿಗೆ ಅಂಜುಮನ್​ ಇಸ್ಲಾಂ ಸಮಿತಿಯಿಂದ ಶರಬತ್​, ತಂಪು ಪಾನೀಯ ವಿತರಿಸಲಾಯಿತು.
Published on

ದೇವರಹಿಪ್ಪರಗಿ: ಗ್ರಾಮದಲ್ಲಿ ನಡೆದ ಶ್ರೀಶೈಲ ಮಲ್ಲಿಕಾರ್ಜುನನ ಐದೇಶಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಗ್ರಾಮದ ಅಂಜುಮನ್​ ಇಸ್ಲಾಂ ಸಮೀತಿಯಿಂದ ಶರಬತ್​ ಹಾಗೂ ತಂಪು ಪಾನೀಯ ನೀಡಿ ಮುಸ್ಲಿಂ ಸಮುದಾಯದವರು ಸೌಹಾರ್ದತೆ ಮೆರೆದರು.ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಅಂಜುಮನ್​ ಇಸ್ಲಾಂ ಸಮಿತಿಯ ರಜಾಕ ಮುಜಾವರ, ಕಲಶಾ ಮಕಾನದಾರ, ಸಾಹೇಬ ಹುಸೇನ ಮುಲ್ಲಾ, ಇಸ್ಮಾಯಿಲ್​ ಪಠಾಣ, ದಾವುಲ್​ ಇನಾಮದಾರ, ಪಿಕೆಪಿಎಸ್​ ಅಧ್ಯ ಸಂಗನಗೌಡ ಬಿರಾದಾರ, ಶರಣಗೌಡ ಬಿರಾದಾರ, ಜಿ.ಪಿ.ಬಿರಾದಾರ, ಬಿ.ಎಸ್​.ಪೊಲೇಶಿ, ಮಲಕು ಸುರಗಿಹಳ್ಳಿ, ಹಣಮಂತ ಹಿರೂರ, ಬಸವರಾಜ ಕಲ್ಲೂರ, ವಿರುಪಾ ರೋಡಗಿ, ಸಿದ್ದು ಬಿರಾದಾರ, ಶೀಶೆಲ ಮಠಪತಿ, ಶಿವು ಹೊನ್ನಳ್ಳಿ, ಮನೋಹರ ಪೂಜಾರಿ, ಶರಣಯ್ಯ ಮಂಗಲಗಿ, ಸಿದ್ದು ಹದರಿ, ಮೆಬೂಬಸಾಬ ಆಹೇರಿ, ಮತಾಬಸಾಬ ಆಹೇರಿ, ದಾವಲಸಾಬ ಗಂಗೂರ, ಕಿರಣ್​ ಗಬ್ಬೂರ, ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net