ದಾಸೋಹ ಮಾಡುವುದು ಪುಣ್ಯ ಕಾರ್ಯ

To be a slave is a virtuous act.
ಮುದ್ದೇಬಿಹಾಳ: ಚನ್ನವಿರ ಶಿವಾಚಾರ್ಯರು ಅಯ್ಯೂಬ್​ ಮನಿಯಾರ್​ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಮಹಿಬೂಬ ಗೊಳಸಂಗಿ, ಕಾಮರಾಜ ಬಿರಾದಾರ, ನೂರೇನಬಿ ನದಾ, ಲಾಳೇಮಶ್ಯಾಕ ನಾಯ್ಕೋಡಿ, ರೂಪಸಿಂಗ್​ ಲೋನಾರೆ ಇದ್ದರು.
Published on

ಮುದ್ದೇಬಿಹಾಳ: ತಂದೆ, ತಾಯಿ ಸ್ಮರಣಾರ್ಥ ಹಬ್ಬ ಹರಿದಿನಗಳಂದು ದಾಸೋಹ ನಡೆಸುವುದು ಪುಣ್ಯದ ಕಾರ್ಯ. ಸಮಾಜ ಸೇವಕ ಅಯ್ಯೂಬ್​ ಮನಿಯಾರ ಅವರು 28 ವರ್ಷಗಳಿಂದ ರಂಜಾನ್​ ಹಬ್ಬದಂದು ಈ ಸೇವೆ ಸಲ್ಲಿಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಕುಂಟೋಜಿ ಭಾವೈಕ್ಯಮಠದ ಡಾ.ಚನ್ನವಿರ ಶಿವಾಚಾರ್ಯರು ಹೇಳಿದರು.

ಇಲ್ಲಿನ ಹುಡ್ಕೋದಲ್ಲಿ ಸಮಾಜ ಸೇವಕ ಅಯ್ಯೂಬ್​ ಮನಿಯಾರ ಅವರು ಮನಿಯಾರ ಚಾರಿಟೇಬಲ್​ ಟ್ರಸ್ಟ್​ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಡ ಮುಸ್ಲಿಮರಿಗೆ ರಂಜಾನ್​ ಕಿಟ್​ ವಿತರಣಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಇಳಕಲ್​ನ ಚಿಂತಕ ಲಾಲಹುಸೇನ ಕಂದಗಲ್​ ಮಾತನಾಡಿ, ಕುರಾನ್​ ನಮ್ಮೊಳಗಿನ ಸ್ವಾರ್ಥ ನಿವಾರಣೆಯ ಪಾಠ ಕಲಿಸಿಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯೆ ಹೆಚ್ಚಾದಂತೆ ಅಹಂಕಾರವೂ ಹೆಚ್ಚಾಗತೊಡಗಿದೆ. ನಿಜವಾದ ವಿದ್ಯಾವಂತ ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು ಎಂದರು.

ಟ್ರಸ್ಟ್​ ಅಧ್ಯ ಅಯ್ಯೂಬ ಮನಿಯಾರ ಮಾತನಾಡಿ, ತಂದೆ, ತಾಯಿ ಸ್ಮರಣೆಯಲ್ಲಿ ದಾನ ಮಾಡುವುದು ತೃಪ್ತಿ ನೀಡುತ್ತದೆ. ಅನ್ಯಾಯದ ಮಾರ್ಗದಲ್ಲಿ ತೃಪ್ತಿ ಇರುವುದಿಲ್ಲ. ಆ ರೀತಿ ಗಳಿಸಿದ ಹಣ ದಾನಕ್ಕೆ ಯೋಗ್ಯವಲ್ಲ. ನಮ್ಮ ಸತ್ಕರ್ಮಗಳು ಸದ್ಗತಿಯ ಮಾರ್ಗ ತೋರಿಸುತ್ತವೆ ಎಂದರು.

ಮೌಲಾನಾ ಅ್ತಾಬ್​ ಇಮಾಮ್​ ಖತೀಬ, ಉದ್ಯಮಿ ರೂಪಸಿಂಗ್​ ಲೋನಾರೆ, ವಿಜಯಮಹಾಂತೇಶ ಸಾಲಿಮಠ ವಕೀಲರು, ಕಸಾಪ ಅಧ್ಯ ಕಾಮರಾಜ ಬಿರಾದಾರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಆರ್​.ಎಸ್​.ಹಿರೇಮಠ ಮಾತನಾಡಿದರು. ಪುರಸಭೆ ಅಧ್ಯ ಮಹಿಬೂಬ ಗೊಳಸಂಗಿ, ಪರವೀನ್​ ಮನಿಯಾರ, ಅ್ತಾಬ್​ ಮನಿಯಾರ, ಮಹಿಬೂಬ ಮನಿಯಾರ, ಮಹ್ಮದ್​ಆಸ್​ೀ ಹಟ್ಟಿ, ಆಸೀಪ್​ ಜಮಾದಾರ, ಮಹಮ್ಮದ್​ ಸಾತಿಹಾಳ, ದಾದಾ ಎತ್ತಿನಮನಿ, ಐ.ಎಲ್​.ಮಮದಾಪುರ, ಬಾಬಾ ಯಕೀನ್​, ಮಹಿಬೂಬ ಯಕೀನ್​ ಪಾಲ್ಗೊಂಡಿದ್ದರು.

400ಕ್ಕೂ ಹೆಚ್ಚು ಬಡಜನರಿಗೆ ಕಿಟ್​ ವಿತರಿಸಲಾಯಿತು. ನೂರೇನಬಿ ನದಾ, ಮುಜಾಹೀದ್​ ನಮಾಜಕಟ್ಟಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net