

ತಾಳಿಕೋಟೆ: ಮಹಾತ್ಮ, ಜ್ಞಾನಿಗಳ ಒಂದೊಂದು ವಾಕ್ಯಗಳು ಮನುಷ್ಯರ ಬದುಕು ಬದಲಿಸಬಲ್ಲ ಸಾಮರ್ಥ್ಯ ಹೊಂದಿರುತ್ತವೆ ಎಂದು ಮುದ್ದೇಬಿಹಾಳ ತಾಲೂಕು ಪಂಚಾಯಿತಿ ಮಾಜಿ ಅಧ್ಯ ದೊಡ್ಡಪ್ಪಗೌಡ ಹಾದಿಮನಿ ಹೇಳಿದರು.
ಸಾಂಭಪ್ರಭು ಶರಣಮುತ್ಯಾಜಾತ್ರೆ ನಿಮಿತ್ತ ಶನಿವಾರ ಹಮ್ಮಿಕೊಂಡಿರುವ ಶ್ರೀ ಪವಾಡ ಬಸವೇಶ್ವರರ ಪುರಾಣ ಆರಂಭ ಹಾಗೂ ಧರ್ಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
160 ವರ್ಷಗಳಿಂದ ಶರಣಮುತ್ಯಾ ಜಾತ್ರೆ ನಡೆಯುತ್ತಿದೆ. ಪ್ರತಿ ವರ್ಷ ಪುರಾಣ ಹೇಳಿಸಲಾಗುತ್ತಿದೆ. ಪುರಾಣ, ಪುಣ್ಯ ಕಥೆ ಕೇಳುವುದರಿಂದ ಮನುಷ್ಯನ ಮನಸ್ಸು ಪರಿವರ್ತನೆಯಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೈಲಾಸಪೇಠೆಯ ಬಸವಪ್ರಭು ದೇವರು ಮಾತನಾಡಿ, ನಾವು ಅನುಭವದ ವಿಚಾರಗಳನ್ನು ತಿಳಿದುಕೊಳ್ಳುವುದು ಅಗತ್ಯವಿದೆ ಎಂದರು.
ಪುರಾಣ ಪ್ರವಚನಕಾರ ಮಹಾದೇವಯ್ಯ ಶಾಸ್ತ್ರೀ ಪವಾಡ ಬಸವೇಶ್ವರರ ಪುರಾಣಕ್ಕೆ ಚಾಲನೆ ನೀಡಿ, ಪವಾಡ ಬಸವೇಶ್ವರರು ಅಪಾರ ಲೀಲೆಗಳನ್ನು ಮಾಡಿದ್ದಾರೆ. ಶೆಟ್ಟರ ಮನೆಯಲ್ಲಿ ಜನ್ಮತಾಳಿದ ಪವಾಡ ಬಸವೇಶ್ವರರು ಅನೇಕ ಪವಾಡಗಳನ್ನು ಮಾಡಿ ಹೋಗಿದ್ದಾರೆಂದರು.
ಶರಣರ ಮಠದ ಬಸಣ್ಣ ಶರಣಮುತ್ಯಾ, ಶರಣಪ್ಪಮುತ್ಯಾ, ಭಂಟನೂರಿನ ಕಾಶಿಬಾಯಿ ಅಮ್ಮ, ಆನಂದ ಶರಣರು, ಸಂಗಮೇಶ ಶರಣರು, ಕಾಶಿರಾಯ ದೇಸಾಯಿ, ಗುರುಮೂರ್ತಿ ಹಿರೇಮಠ, ಮಹಾದೇವಿ ಹಾವಿನಾಳ, ಮಲ್ಲಣ್ಣ ಶರಣರು, ಭೀಮಣ್ಣ ಇಂಗಳಗಿ, ಗುರು ಶರಣರು ಉಪಸ್ಥಿತರಿದ್ದರು.
ಶರಣಗೌಡ ಪೊಲೀಸ್ ಪಾಟೀಲ ಸ್ವಾಗತಿಸಿದರು. ವಿಜಯಕುಮಾರ ಹಿರೇಮಠ ನಿರೂಪಿಸಿದರು. ಈರಣ್ಣ ಶರಣರ ವಂದಿಸಿದರು. ರಾಜು ಗುಬ್ಬೇವಾಡ, ಬಸನಗೌಡ ಬಿರಾದಾರ ಸಂಗೀತ ಸೇವೆ ನಡೆಸಿಕೊಟ್ಟರು.