ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸಂಜೀವ ಆಯ್ಕೆ

Sanjeev elected as standing committee chairman
ನಿಡಗುಂದಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯರಾಗಿ ಅವಿರೋಧ ಆಯ್ಕೆಯಾದ ಸಂಜೀವ ಶೆಟ್ಟೆಪ್ಪ ರಾಠೋಡ ಅವರನ್ನು ಪಪಂ ಮುಖ್ಯಾ-ಕಾರಿ ವಿರೇಶ ಹಟ್ಟಿ ಹಾಗೂ ಸದಸ್ಯರು ಸನ್ಮಾನಿಸಿದರು.
Published on

ನಿಡಗುಂದಿ: ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯರಾಗಿ ಕಾಂಗ್ರೆಸ್​ ಸದಸ್ಯ ಸಂಜೀವ ಶೆಟ್ಟೆಪ್ಪ ರಾಠೋಡ ಅವಿರೋಧ ಆಯ್ಕೆಯಾಗಿದ್ದಾರೆೆ ಎಂದು ಮುಖ್ಯಾಧಿಕಾರಿ ವಿರೇಶ ಹಟ್ಟಿ ತಿಳಿಸಿದ್ದಾರೆ.

ಇತ್ತೀಚೆಗೆ ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಆಡಳಿತ ಹಾಗೂ ವಿರೋಧ ಪದ ಸದಸ್ಯರ ಹೊಂದಾಣಿಕೆ ಮೇರೆಗೆ ಐವರು ಕಾಂಗ್ರೆಸ್​, ಇಬ್ಬರು ಬಿಜೆಪಿ ಸದಸ್ಯರು ಸೇರಿ ಏಳು ಜನರು ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬಳಿಕ, ಸ್ಥಾಯಿ ಸಮಿತಿ ಸದಸ್ಯರು ಸಂಜೀವ ರಾಠೋಡ ಅವರನ್ನು ಅಧ್ಯರನ್ನಾಗಿ ಅವಿರೋಧ ಆಯ್ಕೆ ಮಾಡಿದ್ದಾರೆ ಎಂದರು.

ಪಪಂನ 16 ಸ್ಥಾನಗಳ ಪೈಕಿ 9 ಕಾಂಗ್ರೆಸ್​, 6 ಬಿಜೆಪಿ, ಓರ್ವ ಪೇತರ ಸದಸ್ಯರಿದ್ದಾರೆ. ಪೇತರ ಸದಸ್ಯೆ ದೇಸಾಯಿ ಜಂಬಕ್ಕ ಕಾಂಗ್ರೆಸ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಮಿತಿ ಸದಸ್ಯರನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿರೇಶ ಹಟ್ಟಿ ಹಾಗೂ ಸಿಬ್ಬಂದಿ ಸನ್ಮಾನಿಸಿದರು.

ಸ್ಥಾಯಿ ಸಮಿತಿ ಸದಸ್ಯರು:

ಸಂಜೀವ ಶೆಟ್ಟೆಪ್ಪ ರಾಠೋಡ ಅಧ್ಯ, ಸದಸ್ಯರಾಗಿ ಹನಮಂತ ಗುಂಡಿನಮನಿ, ಗಣೇಶ ಕೂಚಬಾಳ, ನಬಿರಸೂಲ ಬಾಣಕಾರ, ಆರ್​.ರಾಜು, ಕರಿಯಪ್ಪ ಸಿಂದಗಿ, ಬಸವರಾಜ ವಂದಾಲ ಆಯ್ಕೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net