ರೇಣುಕರ ತತ್ವ ಬದುಕಿಗೆ ದಾರಿದೀಪ

Renuka's philosophy is a guiding light for life.
ಇಂಡಿಯ ಜಗದ್ಗುರು ರೇಣುಕಾಚಾರ್ಯರ ವೃತ್ತದಲ್ಲಿ ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ಎಸ್​.ಎಲ್​. ನಿಂಬರಗಿಮಠ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಸೋಮು ನಿಂಬರಗಿಮಠ, ಬಸಯ್ಯ ಪತ್ರಿಮಠ, ಎಎಸ್​ಐ ರೋಹಿತ ಹಿರೇಮಠ ಇತರರಿದ್ದರು.
Published on

ಇಂಡಿ : ಜಗದ್ಗುರು ರೇಣುಕಾಚಾರ್ಯರ ತತ್ವಗಳು ಸಮಾನತೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ದಾರಿದೀಪದಂತಿವೆ ಎಂದು ಜಂಗಮ ಸಮಾಜದ ಗೌರವಾಧ್ಯಕ್ಚ ಎಸ್​.ಎಲ್​. ನಿಂಬರಗಿಮಠ ಹೇಳಿದರು.

ಪಟ್ಟಣದ ಜಗದ್ಗುರು ರೇಣುಕಾಚಾರ್ಯರ ಜಯಂತಿಯಲ್ಲಿ ಮಾತನಾಡಿದ ಅವರು, ವೀರಶೈವ ಧರ್ಮಕ್ಕೆ ತನ್ನದೆ ಆದ ಇತಿಹಾಸವಿದೆ. ರೇಣುಕಾಚಾರ್ಯರು ಧರ್ಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ರೇಣುಕರ ವಿಚಾರಗಳು ಸಾರ್ವಕಾಲಿಕವಾಗಿವೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರುವ ಮೂಲಕ ವಿಶ್ವಗುರುಗಳಾಗಿದ್ದಾರೆ ಎಂದರು.

ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ ಮಾತನಾಡಿದರು.

ಸೋಮು ನಿಂಬರಗಿಮಠ, ಬಸಯ್ಯ ಪತ್ರಿಮಠ, ಎ.ಎಸ್​.ಐ. ರೋಹಿತ ಹಿರೇಮಠ, ಅಜೀತ ಹಿರೇಮಠ, ಸುಧೀರ ಕರಕಟ್ಟಿ, ಯಮನಾಜಿ ಸಾಳುಂಕೆ, ಸತೀಶ ಕುಂಬಾರ, ಸಂಜುದಾದಾ ಚವ್ಹಾಣ, ವಿಜು ಚವ್ಹಾಣ, ಧರ್ಮರಾಜ ವಾಲಿಕಾರ, ಮಡು ಪ್ರಧಾನಿ, ಉದಯ ಹಿರೇಮಠ, ಶಾಂತಯ್ಯ ಹಿರೇಮಠ, ಶ್ರೀಶೈಲ ಗಾಳಿಮಠ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net