ನಿವೃತ್ತ ನೌಕರರ ಸಂದ ಪೂರ್ವಭಾವಿ ಸಭೆ

Pre-meeting of the Retired Employees' Association
ಕೊಲ್ಹಾರ ಎಂಪಿ ಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ನಿವೃತ್ತ ನೌಕರರ ಸಂಗದ ಪದಾಧಿಕಾರಿಗಳ ಸಭೆೆ ಜರುಗಿತು. ಎಂ.ಕೆ. ಚೌಧರಿ, ಪಿ.ಜಿ. ಗಣಿ, ಬಿ.ಎನ್​. ವಂದಾಲ, ವಿಲಾಸ ಪತ್ತಾರ, ಶ್ರೀಶೈಲ ಹರನೆಂಟಿ, ಬಿ.ಎಸ್​.ಹಂಗರಗಿ, ಡಾ. ಬಿ.ಆರ್​.ಮಠ, ಬಸವರಾಜ ಗಿಡ್ಡಪ್ಪಗೋಳ ಇದ್ದರು.
Published on

ಕೊಲ್ಹಾರ: ಬೆಂಗಳೂರಿನಲ್ಲಿ ಏ.4ರಂದು ನಿವೃತ್ತ ನೌಕರರ ಸಂದದಿಂದ ಹಮ್ಮಿಕೊಂಡಿರುವ ರಾಜ್ಯ ರಾಜ್ಯ ಮಟ್ಟದ ಕಾರ್ಯಾಗಾರ ಹಾಗೂ ಬೃಹತ್​ ಸಮಾವೇಶದ ಅಂಗವಾಗಿ ಸರ್ಕಾರಿ ನಿವೃತ್ತ ನೌಕರರ ಸಂ ತಾಲೂಕು ಟಕದ ಪದಾಧಿಕಾರಿಗಳ ಪೂರ್ವಭಾವಿ ಸಭೆ ಪಟ್ಟಣದ ಎಂಪಿಎಸ್​ ಶಾಲೆಯ ಸಭಾಂಗಣದಲ್ಲಿ ಇತ್ತಿಚೆಗೆ ಜರುಗಿತು

ನಿವೃತ್ತ ಶಿಕ್ಷಕ ಕಲ್ಲಪ್ಪ ಗಿಡ್ಡಪ್ಪಗೋಳ ಮಾತನಾಡಿ, 2022 ರಿಂದ 2024 ರವರಿಗೆ ನಿವೃತ್ತಿ ಹೊಂದಿದ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯ ಸಿಗದಿರುವುದನ್ನು ಖಂಡಿಸಿ ಏಪ್ರಿಲ್​ 4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಬೃಹತ್​ಪ್ರತಿಭಟನೆ ನಡೆಸಲಾಗುತ್ತದೆ. ಬೆಂಗಳೂರಿನ ಅರಮನೆ ಮೈದಾನ ಆವರಣದಲ್ಲಿ ಏ.5ರಂದು ಬೆಳಗ್ಗೆ 10ಕ್ಕೆ ರಾಜ್ಯ ಮಟ್ಟದ ಕಾರ್ಯಾಗಾರ ಮತ್ತು ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಎಸ್​.ಎಲ್​. ಭೈರಪ್ಪ್ಪ, ಸಿ.ಎಸ್​. ಷಡಾರಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.

ಪೂರ್ವ ಭಾವಿ ಸಭೆಯಲ್ಲಿ ಎಂ.ಕೆ.ಚೌಧರಿ, ಪಿ.ಜಿ.ಗಣಿ, ಬಿ.ಎನ್​. ವಂದಾಲ, ವಿಲಾಸ ಪತ್ತಾರ, ಶ್ರೀಶೈಲ ಹರನೆಂಟಿ, ಬಿ.ಎಸ್​. ಹಂಗರಗಿ, ಡಾ. ಬಿ.ಆರ್​. ಮಠ,ಬಸವರಾಜ ಗಿಡ್ಡಪ್ಪಗೋಳ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net