ಮಕ್ಕಳ ಕಲಿಕೆಗೆ ಸಾಮಗ್ರಿ ಸಹಕಾರಿಯಾಗಲಿ

May the materials be helpful in children's learning.
ಗೊಳಸಂಗಿ ಮಾದರಿ ಬಡಾವಣೆಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಬಿಎಚ್​ಟಿಪಿಎಲ್​, ಮೇಕಿಂಗ್​ ಡಿರೆನ್ಸ್​ ಚಾರಿಟೆಬಲ್​ ಟ್ರಸ್ಟ್​ ವತಿಯಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಡಿ.ಬಿ.ಕುಪ್ಪಸ್ತ, ಶಿವಾನಂದ ಮನಗೂಳಿ, ಬಸವರಾಜ ಜಾನಕರ ಇದ್ದರು.
Published on

ಗೊಳಸಂಗಿ: ಸರ್ಕಾರಿ ಶಾಲೆಗಳ ಬಡ ಮಕ್ಕಳ ಕಲಿಕೆಗೆ ಸಹಕಾರಿಯಾಗಲೆಂಬ ಸದುದ್ದೇಶದಿಂದ ಕಲಿಕಾ ಸಾಮಗ್ರಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳ್ಳಬೇಕು ಎಂದು ಎಸ್​ಡಿಎಂಸಿ ಮಾಜಿ ಅಧ್ಯ ಡಿ.ಬಿ.ಕುಪ್ಪಸ್ತ ಹೇಳಿದರು.

ಮಾದರಿ ಬಡಾವಣೆಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಬಿಎಚ್​ಟಿಪಿಎಲ್​ ನಿರ್ದೇಶನದಂತೆ ಮೇಕಿಂಗ್​ ದಿ ಡಿರೆನ್ಸ್​ ಚಾರಿಟೆಬಲ್​ ಟ್ರಸ್ಟ್​ ವತಿಯಿಂದ ಶುಕ್ರವಾರ ಶೈಣಿಕ ಸಲಕರಣೆ ವಿತರಿಸಿ ಮಾತನಾಡಿದರು.

ಅದೆಷ್ಟೋ ಸರ್ಕಾರಿ ಶಾಲೆಗಳು ಮೂಲ ಸೌಲಭ್ಯದಿಂದ ವಂಚಿತಗೊಂಡು ಕಲಿಕಾ ಹಂತದಲ್ಲಿ ಮುಗ್ಗರಿಸುತ್ತಿವೆ. ಅಂಥ ಶಾಲೆಗಳನ್ನು ಗುರುತಿಸಿ ಮುನ್ನೆಲೆಗೆ ತರುವ ಪ್ರಯತ್ನವನ್ನು ಬಿಎಚ್​ಟಿಪಿಎಲ್​, ಮೇಕಿಂಗ್​ ಡಿರೆನ್ಸ್​ ಚಾರಿಟೆಬಲ್​ ಟ್ರಸ್ಟ್​ ಮಾಡುತ್ತಿರುವುದು ಶ್ಲಾನೀಯ ಎಂದರು.

ಎಸ್​ಡಿಎಂಸಿ ಅಧ್ಯ ಶಿವಾನಂದ ಮನಗೂಳಿ, ಮುಖ್ಯಗುರು ಬಸವರಾಜ ಜಾನಕರ, ಶಿಕಿ ರಾಧಾ ಹಂಗರಗಿ, ಬಿಎಚ್​ಟಿಪಿಎಲ್​ ಮತ್ತು ಮೇಕಿಂಗ್​ ದಿ ಪಿರೆನ್ಸ್​ ಚಾರಿಟೇಬಲ್​ ಟ್ರಸ್ಟ್​ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net