ಶಂಕರ ಮಠದ ಶ್ರೀಗಳ ಭವ್ಯ ಶೋಭಾಯಾತ್ರೆ

Grand procession of the monks of Shankara Math
ವಿಜಯಪುರಕ್ಕೆ ಗುರುವಾರ ಸಂಜೆ ಆಗಮಿಸಿದ ಶಂಕರ ಮಠದ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ಶೋಭಾಯಾತ್ರೆ ನಡೆಯಿತು.
Published on

ವಿಜಯಪುರ : ನಗರಕ್ಕೆ ದಿಗ್ವಿಜಯ ಮಾಡಿರುವ ಶೃಂಗೇರಿ ಶಾರದಾ ಪೀಠ ಶಂಕರ ಮಠದ ಶ್ರೀ ವಿಧುಶೇಖರ ಭಾರತಿ ಶ್ರೀಪಾದಂಗಳವರನ್ನು ಗುರುವಾರ ಸಂಜೆ ನಗರದ ಸಮಸ್ತ ವಿಪ್ರ ಸಮಾಜದವರು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.ನಗರದ ರಾವೇಂದ್ರ ಕಾಲನಿಯಲ್ಲಿರುವ ರಜತಗಿರಿ ಮಾರುತಿ ದೇವಸ್ಥಾನದಿಂದ ವಜ್ರಹನುಮಾನ ನಗರದಲ್ಲಿರುವ ಶಂಕರ ಮಠದವರೆಗೆ ಶ್ರೀಗಳ ಭವ್ಯ ಶೋಭಾಯಾತ್ರೆ ನಡೆಯಿತು. ಮಹಿಳೆಯರು ಭಜನೆ ಮಾಡುತ್ತ ಮೆರವಣಿಗೆ ಮುಂದೆ ಸಾಗಿದ್ದರು.

ಶಂಕರ ಮಠದ ವಾರ್ಷಿಕೋತ್ಸವ ನಿಮಿತ್ತ ಶ್ರೀಗಳು ನಗರಕ್ಕೆ ಆಗಮಿಸಿದ್ದು, ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಭಕ್ತರನ್ನು ಅನುಗ್ರಹಿಸುವರು.

ವಿಜಯ ಜೋಶಿ, ಪ್ರಕಾಶ ಅಕ್ಕಲಕೋಟ, ವಿಕಾಸ ಪದಕಿ, ರಾಕೇಶ್​ ಕುಲಕರ್ಣಿ, ಅಪ್ಪಣ್ಣ ಗಾಯಿ, ಪಂ. ಪ್ರಸನ್ನಚಾರ್ಯ ಕಟ್ಟಿ, ಶಂಕರ ಮಠದ ಅಧ್ಯ ಮಹೇಶ ದೇಶಪಾಂಡೆ, ಶ್ರೀಹರಿ ಗೊಳಸಂಗಿ, ಶ್ರೀನಿವಾಸ ಬೆಟಗೇರಿ, ರಂಗಭಟ್ಟ ಜೋಶಿ, ಸೋಮಯಾಜಿ, ಕೃಷ್ಣ ಭಟ್ಟ ಗಲಗಲಿ, ಕಿರಣ ಇನಾಮದಾರ, ಮುಕುಂದ ಕುಲಕರ್ಣಿ ಗಿರೀಶ ಅಕ್ಕಲಕೋಟ, ಅರುಣ ಸೋಲಾಪುರಕರ, ದತ್ತಾ ಜೋಶಿ, ವಲ್ಲಭ ಮನಗೂಳಿ, ಅಶೋಕ ಕಾರಜೋಳ ಹಾಗೂ ವಿಪ್ರ ಸಮಾಜದ ಪ್ರಮುಖರು, ಮಹಿಳೆಯರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net