ಅಂಗವಿಕಲರ ಕುಂದುಕೊರತೆ ಸಭೆ ನಡೆಸಲು ಆಗ್ರಹ

Demand to hold a meeting to address the grievances of the disabled
ಅಂಗವಿಕಲರ ಕುಂದುಕೊರತೆ ಆಲಿಸಲು ಸಭೆ ನಡೆಸಬೇಕು ಎಂದು ಆಗ್ರಹಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳು ಸಿಂದಗಿ ತಹಸೀಲ್ದಾರ್​ ಡಾ.ಪ್ರದಿಪಕುಮಾರ ಹಿರೇಮಠಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯ ವಿಠ್ಠಲ ಕರ್ಜಗಿ, ಅಶೋಕ ವಾಲಿಕಾರ, ಸುರೇಶ ಜವಳಗಿ ಇದ್ದರು.
Published on

ಸಿಂದಗಿ: ಅಂಗವಿಕಲರ ಕುಂದುಕೊರತೆ ಆಲಿಸಲು ತಾಲೂಕು ಮಟ್ಟದಲ್ಲಿ ಸಭೆ ನಡೆಸುವಂತೆ ಆಗ್ರಹಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಪದಾಧಿಕಾರಿಗಳು ತಹಸೀಲ್ದಾರ್​ ಡಾ.ಪ್ರದಿಪಕುಮಾರ ಹಿರೇಮಠಗೆ ಗುರುವಾರ ಮನವಿ ಸಲ್ಲಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲಿಕಾರ, ತಾಲೂಕು ಅಧ್ಯ ವಿಠ್ಠಲ ಕರ್ಜಗಿ ಮಾತನಾಡಿ, ಸರ್ಕಾರ ಅಂಗವಿಕಲರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡುವ ಉದ್ದೇಶದಿಂದ ಸಭೆ ನಡೆಸುವುದು ಅಗತ್ಯವಾಗಿದೆ ಎಂದರು.

ಪ್ರತಿ ತಿಂಗಳ ಮೂರನೇ ಸೋಮವಾರ ಸಭೆ ನಡೆಸಬೇಕು ಎಂಬ ನಿಯಮವಿದ್ದರೂ ಯಾರು ಪಾಲಿಸುತ್ತಿಲ್ಲ. ಅಂಗವಿಕಲರ ಹಕ್ಕುಗಳ ರಣೆ, ಅನುದಾನದ ಸದ್ಬಳಕೆ ಮತ್ತು ವಿವಿಧ ವಿಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕಾಯಂ ನೇಮಕಾತಿ ಮೂಲಕ ಮುಖ್ಯವಾಹಿನಿಗೆ ಕರೆತರುವಲ್ಲಿ ಈ ಸಭೆ ಮಹತ್ವದ್ದಾಗಿದ್ದು, ಸರ್ಕಾರದ ಆದೇಶದನ್ವಯ ತಮ್ಮ ಅಧ್ಯತೆಯಲ್ಲಿ ತಾಲೂಕು ಮಟ್ಟದ ಕುಂದುಕೊರತೆ ಸಭೆ ಕರೆಯುವಂತೆ ತಹಸೀಲ್ದಾರರಲ್ಲಿ ಮನವಿ ಮಾಡಿದರು.

ಮಲ್ಲಿಕಾರ್ಜುನ ಕರನಾಳ, ಸುರೇಶ ಜವಳಗಿ, ಶಿವಾನಂದ ಆನಗೊಂಡ, ರಾಜಕುಮಾರ ಚಾಂದಕವಠೆ, ಭಾಗಪ್ಪ ಹರಿಜನ, ಕಲ್ಲಪ್ಪ ತ್ರಿ, ಮಲ್ಲಪ್ಪ ದೊಡಮನಿ, ಗುರನಾಥ ಬಂಡಿವಡ್ಡರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net