ಸತ್ಸಂಗದಿಂದ ಸದಾಚಾರ ಪ್ರಾಪ್ತಿ

Attaining righteousness through satsang
ಮಹಾದೇವಯ್ಯ ಶಾಸ್ತ್ರಿ
Published on

ತಾಳಿಕೋಟೆ: ಸತ್ಸಂಗದಿಂದ ಸದಾಚಾರ ಪ್ರಾಪ್ತಿಯಾಗುತ್ತದೆ. ಸದಾಚಾರದಿಂದ ಭವಿಷ್ಯ ಉಜ್ವಲವಾಗುತ್ತದೆ ಎಂದು ಮಹಾದೇವಯ್ಯ ಶಾಸ್ತ್ರಿ ಹೇಳಿದರು.

ಶರಣ ಮುತ್ಯಾ ದೇವಸ್ಥಾನದಲ್ಲಿ ಪವಾಡ ಬಸವೇಶ್ವರ ಪುರಾಣ ಹೇಳಿದ ಅವರು, ಜ್ಞಾನವೆಂಬ ಹಾಲನ್ನು ಸತ್ಸಂಗವೆಂಬ ಬೆಂಕಿಯಿಂದ ಕಾಯಿಸಿದಾಗ ಭಕ್ತಿ ಎಂಬ ತುಪ್ಪ ಸಿಗುತ್ತದೆ. ಭಕ್ತಿ ಎಂಬ ತುಪ್ಪದಿಂದ ಭಗವಂತನೆಂಬ ಸುಖವನ್ನು ಪಡೆಯಬೇಕು ಎಂದರು.

ಮಹಾತ್ಮರ ಪುರಾಣ ಧರ್ಮದ ದಾರಿ ತೋರಿಸುತ್ತದೆ. ಉತ್ತಮ ಸಮಾಜ ನಿರ್ಮಾಣವಾಗಬೇಕು. ಎಲ್ಲರೂ ಜ್ಞಾನವಂತರಾಗಿ ಬಾಳಬೇಕು ಎಂಬ ಉದ್ದೇಶ ಪವಾಡ ಬಸವೇಶ್ವರರು ಹೊಂದಿದ್ದರು ಎಂದರು.

ಎಷ್ಟು ಚಿನ್ನ ಕೊಟ್ಟರೂ ತಾಯಿ ತೂಕದ ಸಮವಾಗುವುದಿಲ್ಲ. ಅಂಥ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸಂಸತಿ ಬೆಳೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಶರಣರ ಮಠದ ಬಸಣ್ಣ ಶರಣಮುತ್ಯಾ, ಶರಣಪ್ಪಮುತ್ಯಾ, ಆನಂದ ಶರಣರು, ಸಂಗಮೇಶ ಶರಣರು, ಕಾಶಿರಾಯ ದೇಸಾಯಿ, ಗುರುಮೂರ್ತಿ ಹಿರೇಮಠ, ಮಹಾದೇವಿ ಹಾವಿನಾಳ, ಮಲ್ಲಣ್ಣ ಶರಣರು, ಭೀಮಣ್ಣ ಇಂಗಳಗಿ, ಗುರು ಶರಣರು, ಸಿದ್ದಣ್ಣ ಶರಣರು, ಶಾಂತಗೌಡ ಬಿರಾದಾರ, ಶ್ರೀಕಾಂತ ಬಿರಾದಾರ, ಮಲ್ಲಣ್ಣ ಇಂಗಳಗಿ, ಗುರುಮೂರ್ತಿ ಹಿರೇಮಠ, ಸಾಹಿಲ್​ ಮುರಾಳ, ಉಪಸ್ಥಿತರಿದ್ದರು. ರಾಜು ಗುಬ್ಬೇವಾಡ, ಬಸನಗೌಡ ಬಿರಾದಾರ ಅವರು ಸಂಗೀತ ಸೇವೆ ಸಲ್ಲಿಸಿದರರು. ಶರಣಗೌಡ ಪೊಲೀಸ್​ಪಾಟೀಲ ಸ್ವಾಗತಿಸಿದರು. ಈರಣ್ಣ ಶರಣರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net