

ಮುದ್ದೇಬಿಹಾಳ: ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯ ಎಂದು ಶಾಸಕ, ಸಾಬೂನು, ಮಾರ್ಜಕ ನಿಗಮದ ಅಧ್ಯ ಸಿ.ಎಸ್.ನಾಡಗೌಡ ಹೇಳಿದರು.
ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ರಾಜ್ಯ ಯುವ ಸಂಟನೆಗಳ ಒಕ್ಕೂಟದಿಂದ ಬುಧವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ರಾಷ್ಟ್ರೀಯ, ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ, ದಿನದರ್ಶಿಕೆ ಬಿಡುಗಡೆ, ಸಾಂಸತಿಕ ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಸ್ವೇಚ್ಛಾಚಾರದ ಪ್ರಭಾವಕ್ಕೊಳಗಾಗಿ ದಾರಿ ತಪ್ಪುತ್ತಿರುವ ಯುವ ಸಮೂಹವನ್ನು ಸರಿದಾರಿಗೆ ತರಲು ವಿವೇಕಾನಂದರ ವಿಚಾರಧಾರೆ, ಚಿಂತನೆಗಳ ಪ್ರಸಾರ, ಪಾಲನೆ ಮಹತ್ವದ್ದಾಗಿದೆ ಎಂದರು.
ಚಿತ್ರನಟ, ಜಾನಪದ ಗಾಯಕ ಗುರುರಾಜ ಹೊಸಕೋಟೆ ಮಾತನಾಡಿ, ಜನಪದ ಸಾಹಿತ್ಯ ಎಲ್ಲ ಸಾಹಿತ್ಯಗಳ ತಾಯಿಬೇರು. ಬದುಕನ್ನು ಕಟ್ಟಿಕೊಡುವ ಶಕ್ತಿ ಜನಪದ ಸಾಹಿತ್ಯಕಿದೆ. ಆದರೆ, ಇಂದಿನ ಜನಪದ ಸಾಹಿತ್ಯ ಸಾಗುತ್ತಿರುವ ರೀತಿ ಆತಂಕ ತರುವಂಥದ್ದು. ಸಾಹಿತಿಗಳು, ಯುವ ಗಾಯಕರು ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಒಕ್ಕೂಟದ ರಾಜ್ಯಾಧ್ಯ ಡಾ. ಜಾನಪದ ಎಸ್. ಬಾಲಾಜಿ ಮಾತನಾಡಿ, ಸರ್ಕಾರ ಮಾಡುವ ಕೆಲಸ ಒಕ್ಕೂಟ ಮಾಡುತ್ತಿದೆ. ಸರ್ಕಾರದಿಂದಲೇ ಯುವಪ್ರಶಸ್ತಿ ಕೊಡುವ ಪದ್ಧತಿ ನಿಂತುಹೋಗಿದ್ದು ಮತ್ತೇ ಪ್ರಾರಂಭಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಸಿದ್ಧ್ದನಕೊಳ್ಳದ ಡಾ. ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಿವೃತ್ತ್ತ ಡಿವೈಎಸ್ಪಿ ಬಸವರಾಜ ಚೌಕಿಮಠ, ರಾಮಲಿಂಗಯ್ಯ ಸ್ವಾಮೀಜಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಪುರಸಭೆ ಅಧ್ಯ ಮಹೆಬೂಬ ಗೊಳಸಂಗಿ, ಗಣ್ಯರಾದ ನೇತಾಜಿ ನಲವಡೆ, ಸಂಗೀತಾ ನಾಡಗೌಡ, ಕಾಶಿಬಾಯಿ ರಾಂಪುರ, ಅಹಲ್ಯಾದೇವಿ ಹೋಳ್ಕರ್ ಶಿಣ ಸಂಸ್ಥೆ ನಿರ್ದೇಶಕ ಕಿರಣ್ ಮದರಿ, ಸುರೇಶಗೌಡ್ರು ಹಿರೇಮಠ, ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ, ಮಹಾಂತೇಶ ಗಂಗನಗೌಡರ, ಬಾಲಾಜಿ ಸಕ್ಕರೆ ಕಾರ್ಖಾನೆಯ ಅದೀಕ್ ಪಾಟೀಲ, ಸುನೀಲ ಇಲ್ಲೂರ, ಗಣೇಶ ಅನ್ನಗೌನಿ, ವೈ.ಎಚ್. ವಿಜಯಕರ, ಸಂಗಣ್ಣ ಕಂಚ್ಯಾಣಿ, ಒಕ್ಕೂಟದ ಬಾಗಲಕೋಟ ಜಿಲ್ಲಾಧ್ಯ ದಾನಯ್ಯಸ್ವಾಮಿ ಹಿರೇಮಠ, ತಾಲೂಕು ಅಧ್ಯಕ್ಷ ವೀರೇಶ ಗುರುಮಠ ಪಾಲ್ಗೊಂಡಿದ್ದರು.
13 ಸಾಧಕರಿಗೆ ರಾಷ್ಟ್ರೀಯ, 26 ಸಾಧಕರಿಗೆ ರಾಜ್ಯ, ಸ್ಥಳಿಯ ಹಸಿರು ತೋರಣ ಗೆಳೆಯರ ಬಳಗ ಸೇರಿ ಮೂರು ಸಂಟನೆಗಳಿಗೆ ಸಾಂಘಿಕ, ಬೆಂಗಳೂರು ನಗರ ಜಿಲ್ಲೆಯ ಕಡಬಗೆರೆ ಮುನಿರಾಜುಗೆ ರಾಷ್ಟ್ರೀಯ ಜಾನಪದ ಶ್ರೀ, ತುಮಕೂರು ಜಿಲ್ಲೆಯ ಬಿ.ಸಿ. ರಂಗಣ್ಣಗೆ ರಾಷ್ಟ್ರೀಯ ಯುವ ಜಾನಪದ ಶ್ರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಒಕ್ಕೂಟದ ಜಿಲ್ಲಾಧ್ಯ ಪುಂಡಲೀಕ ಮುರಾಳ ಸ್ವಾಗತಿಸಿದರು. ಶಿಕ ಬಿ.ಎಸ್. ಹಂಚಲಿ, ಹೇಮಾ ಬಿರಾದಾರ ನಿರೂಪಿಸಿದರು.