ರುದ್ರ ಮಹಾಶಿವಯೋಗಿ ಮೂರ್ತಿ ಮೆರವಣಿಗೆ

Rudra Mahashivayogi idol procession
ಶಿಗಣಾಪುರದಲ್ಲಿ ಗುರುವಾರ ಜರುಗಿದ ಪವಾಡ ಪುರುಷ ರುದ್ರ ಮಹಾಶಿವಯೋಗಿಗಳ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು.
Published on

ಹೊರ್ತಿ: ಸಮೀಪದ ಶಿಗಣಾಪುರದಲ್ಲಿ ಪವಾಡ ಪುರುಷ ರುದ್ರ ಮಹಾಶಿವಯೋಗಿಗಳು ಹಾಗೂ ಮಹಾಲಕ್ಷಿ$್ಮ, ಸಿದ್ಧಾರೂಢರ ಭಾವಚಿತ್ರ ಹಾಗೂ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗುರುವಾರ ನಡೆಯಿತು.

ನಂದಿಕೋಲು, ಮಹಿಳೆಯರಿಂದ ಕುಂಭ, ಗೊಂಬೆ ಕುಣಿತ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಸಿದ್ಧಾರೂಢ ದೇವಸ್ಥಾನದವರೆಗೆ ಸಂಚರಿಸಿತು. ಮತ್ತೆ ಅಲ್ಲಿಂದ ಮರಳಿ ರುದ್ರ ಮಹಾಶಿವಯೋಗಿಗಳ ದೇವಸ್ಥಾನಕ್ಕೆ ತಲುಪಿತು.

ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಜಾತ್ರಾ ಕಮಿಟಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net