

ತಾಳಿಕೋಟೆ: ಹಿಂದಿನ ಕಾಲದಲ್ಲಿ ಭೂಮಿತಾಯಿ ಹಾಗೂ ಸೂರ್ಯನಿಗೆ ನಮಸ್ಕರಿಸುವ ಕಾರ್ಯ ನಡೆಯುತ್ತಿತ್ತು. ಬದಲಾದ ಇಂದಿನ ಕಾಲದಲ್ಲಿ ಮುಗಿಯುವ ಕೈಗಳಲ್ಲಿ ಮೊಬೈಲ್ಗಳ ಅಟ್ಟಹಾಸ ಮೆರೆಯುತ್ತಿದೆ ಎಂದು ಶಿಕಿ ಶಿವಲೀಲಾ ಮುರಾಳ ಕಳವಳ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮುದ್ದೇಬಿಹಾಳ ಟಕದಿಂದ ಪಟ್ಟಣದ ಶ್ರೀ ವಿಠ್ಠಲ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯಿ ಮಕ್ಕಳಿಗೆ ಆದರ್ಶವಾಗುತ್ತಾಳೆ. ಹೀಗಾಗಿ ತಾಯಿಯಾದವಳು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡಬೇಕು ಎಂದು ಸಲಹೆ ನೀಡಿದರು.
ಮುದ್ದೇಬಿಹಾಳ ಯೋಜನಾಧಿಕಾರಿ ನಾಗೇಶ ಎಂ.ಪಿ. ಮಾತನಾಡಿ, ಆರೋಗ್ಯ, ಶಿಣ, ಸ್ವಚ್ಛತೆ ಮತ್ತು ಪೌಷ್ಟಿಕ ಆಹಾರ ಕುರಿತು ಸಲಹೆ ನೀಡಿದರು. ಮಂಜುಳಾ ಕೆಸರಟ್ಟಿ ಒಕ್ಕೂಟದ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಿದರು.
ಜನಜಾಗೃತಿ ವೇದಿಕೆ ಸದಸ್ಯ ವಾಸುದೇವ ಹೆಬಸೂರ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಜತೆ ಉತ್ತಮ ಸಂಸ್ಕಾರ ಕಲಿಸುವ ಕಾರ್ಯ ಮಾಡಿದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂ ಮಾಡುತ್ತಿರುವ ವ್ಯಸನಮುಕ್ತ ಹಾಗೂ ಪೋಲಾಗುತ್ತಿರುವ ನೀರಿಗೆ ಕಡಿವಾಣ ಹಾಕುವ ಕಾರ್ಯ ಶ್ಲಾನೀಯ ಎಂದರು.
ಪುರಸಭೆ ಅಧ್ಯೆ ಜುಬೇದಾ ಜಮಾದಾರ, ಉಪಾಧ್ಯೆ ಗೌರಮ್ಮ ಕುಂಬಾರ, ವಿಠ್ಠಲ ಮಂದಿರ ಟ್ರಸ್ಟ್ ಅಧ್ಯ ಸಂಭಾಜಿ ವಾಡಕರ, ಜನಜಾಗೃತಿ ವೇದಿಕೆ ಸದಸ್ಯ ಮೋಹನ ಬಡಿಗೇರ, ಪ್ರಮುಖರಾದ ರಾಜಣ್ಣ ಸೊಂಡೂರ, ಸುವರ್ಣಾ ಬಿರಾದಾರ, ಶಾರದಾ ಹಿರೇಮಠ, ಸೋಮನಗೌಡ, ನೋಡಲ್ ಅಧಿಕಾರಿ ಲಕ್ಕಪ್ಪ ಟಿ.ಎನ್, ಮೇಲ್ವಿಚಾರಕರಾದ ದಾನಮ್ಮ ಇಜೇರಿ, ನೇತ್ರಾವತಿ, ಸೌಮ್ಯದರ್ಶಿನಿ, ರೇಣುಕಾ ಪಾಲ್ಗೊಂಡಿದ್ದರು.
ಒಕ್ಕೂಟದ ಅಧ್ಯೆ ಜಯಶ್ರೀ ಸಜ್ಜನ ಪ್ರಾರ್ಥಿಸಿದರು. ಸುಜಾತಾ ಸ್ವಾಗತಿಸಿದರು. ಸಾಯಬಣ್ಣ ನಿರೂಪಿಸಿದರು.