

ದೇವರಹಿಪ್ಪರಗಿ : ಜೀವನ ದೇವರು ಕೊಟ್ಟ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು ಸರಿಯಾಗಿ ಜೋಪಾನ ಮಾಡಿಕೊಂಡು ಬದುಕು ಹಸನುಗೊಳಿಸಿಕೊಳ್ಳಬೇಕು ಎಂದು ಬಾಲಗಾಂವ ಶ್ರೀಮಠದ ಅಮೃತಾನಂದ ಸ್ವಾಮೀಜಿ ಹೇಳಿದರು.
ಕಡ್ಲೇವಾಡ ಪಿಸಿಎಚ್ ಗ್ರಾಮದ ರಾಚೋಟೇಶ್ವರ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನದಲ್ಲಿ ಆಶೀರ್ವಚನ ನೀಡಿದ ಅವರು, ಧಾರ್ಮಿಕದ ಒಲವು ಬದುಕು ಬಂಗಾರವಾಗಿಸುತ್ತದೆ. ಇನ್ನೊಬ್ಬರಿಗೆ ತೊಂದರೆ ಕೊಡುವುದಕ್ಕೂ ಮನಸ್ಸು ಒಪ್ಪುವುದಿಲ್ಲ. ಇಡೀ ಜೀವನದಲ್ಲಿ ಎಲ್ಲರೊಂದಿಗೆ ಬೆರೆತು ಸಮಾಜಮುಖಿಯಾಗಿರಬೇಕು. ದೇವಲೀಲೆಯಿಂದ ದೈವತ್ವ್ವ ಪಡೆದು ಬದುಕು ಬದಲಾಯಿಸಿಕೊಳ್ಳಬೇಕು ಎಂದರು.
ಧಾರ್ಮಿಕ ಗ್ರಂಥಗಳ ಅಧ್ಯಯನ ಸದಾ ಚಿಂತನಶೀಲರನ್ನಾಗಿಸಲು ಸಹಕಾರಿಯಾಗುತ್ತದೆ. ಜೀವನಪೂರ್ತಿ ದೇವನಾಮಸ್ಮರಣೆಯಲ್ಲಿ ಕಾಯಕನಿಷ್ಠೆಯಿಂದ ಇರಬೇಕು ಆಗ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ ಎಂದರು.
ಪ್ರಚಾರ ಸಮಿತಿ ಅಧ್ಯ ಸಾಯಿಕುಮಾರ ಬಿಸನಾಳ, ಚಿಕ್ಕರೂಗಿ ಪಿಕೆಪಿಎಸ್ ಅಧ್ಯ ನಾಗಣ್ಣ ಮುಳಜಿ, ಸೋಮನಗೌಡ ಪಾಟೀಲ, ವಿಠ್ಠಲ ದೆಗಿನಾಳ, ಅಶೋಕ ಸಾಹುಕಾರ ಸುಳಿಬಾವಿ, ಮಲ್ಲಿಕಾರ್ಜುನ ಬಿರಾದಾರ, ಸಿದ್ದಣ್ಣ ಸಾಹುಕಾರ ಚಂಡಕಿ, ಅಡಿವೆಪ್ಪ ಕೊಂಡಗೂಳಿ, ಸಂಗನಗೌಡ ಬಿರಾದಾರ, ವಿದ್ಯಾಧರ ಸಂಗೋಗಿ, ಸುಬ್ಬಣ್ಣ ಕಬಾಡಗಿ, ಮಲಕಪ್ಪ ಪಾಟೀಲ, ಚಂದ್ರಶೇಖರ ಗಣಜಲಿ, ಯಲ್ಲಾಲಿಂಗ ಗಣಜಲಿ ಬಸವರಾಜ ಇಮ್ಮನ, ದೇವಾನಂದ ಹೂಗಾರ ಹಾಗೂ ಭಕ್ತರು ಪಾಲ್ಗೊಂಡಿದ್ದರು.