ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸಿ

Improve the traffic system on the highway
ದೇವರಹಿಪ್ಪರಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ&50 ರಲ್ಲಿನ ಸಂಚಾರ ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಪದಾ-ಕಾರಿಗಳು ಉಪತಹಸೀಲ್ದಾರ್​ ಸುರೇಶ ಮ್ಯಾಗೇರಿಗೆ ಮನವಿ ಸಲ್ಲಿಸಿದರು.
Published on

ದೇವರಹಿಪ್ಪರಗಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ&50 ರಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಉಪತಹಸೀಲ್ದಾರ್​ ಸುರೇಶ ಮ್ಯಾಗೇರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಮಧ್ಯೆದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ಟ್ರಾಫಿಕ್​ ಸಮಸ್ಯೆ ಹೆಚ್ಚಾಗುತ್ತಿದು,್ದ ಜನಸಂಚಾರಕ್ಕೆ ತೊಂದರೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ತರಕಾರಿ, ವಿವಿಧ ವ್ಯಾಪಾರ ವಹಿವಾಟು ನಡೆಸುವುದರಿಂದ ಜನದಟ್ಟಣೆ ಹೆಚ್ಚಾಗುತ್ತಿದೆ. ಕಳೆದ ನಾಲ್ಕು ದಿನದಲ್ಲಿ ಇಬ್ಬರು ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಸಂಚಾರ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೆದ್ದಾರಿ ಮೇಲಿನ ತರಕಾರಿ ಮಾರುಕಟ್ಟೆಯನ್ನು ಬೇರೆಡೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಸೇನೆ ತಾಲೂಕು ಅಧ್ಯ ಹಸನಸಾಬ್​ ನದ್​ಾ, ಶಹೀದ್​ ರೂಗಿ, ಸುನೀಲ ಕನಮಡಿ, ಇಬ್ರಾಹಿಂ ಮಸಳಿ, ಇಮಾಮ್​ ಮುಲ್ಲಾ, ಮೈಬೂಬ್​ ಆಲಮೇಲಕರ, ಶಿವು ರೊಳ್ಳಿ, ಕುಮಾರ ರಾಠೋಡ, ಮಲ್ಲು ಉತ್ನಾಳ, ಇಾರ್ನ್​ ಮಸಳಿ, ವಾಸೀಂ ಮುಲ್ಲಾ, ಬೀರು ಹಳ್ಳಿ, ಪರಶುರಾಮ ನಾಯ್ಕೋಡಿ, ಹಮೀದ್​ ಮುಲ್ಲಾ, ಪ್ರಕಾಶ ಶಾಂತಗಿರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net