ಮಕ್ಕಳ ಸಂತೆಯಿಂದ ವ್ಯವಹಾರ ಜ್ಞಾನ ವೃದ್ಧಿ

https://cdn.vvimgs.com/wp-content/uploads/2025/02/Enhancing-business-knowledge-through-children.webp
ಶಿರಾಡೋಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆಯಲ್ಲಿ ಪಾಲಕರು ಹಾಗೂ ಶಿಕರು ವಸ್ತುಗಳನ್ನು ಖರೀದಿಸಿದರು.
Published on

ರೇವತಗಾಂವ: ಮಕ್ಕಳ ಸಂತೆ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನ ವೃದ್ಧಿಯಾಗುತ್ತದೆ ಎಂದು ರೇವತಗಾಂವ ಗ್ರಾ.ಪಂ.ಉಪಾಧ್ಯ ಸುರೇಶ ಬನಸೋಡೆ ಹೇಳಿದರು.

ಶಿರಾಡೋಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಲ್ಲಿ ಕಲಿಕೆ ಜತೆಗೆ ವ್ಯಾವಹಾರಿಕ ಜ್ಞಾನ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗುತ್ತವೆ ಎಂದರು.

ಪ್ರಭಾರಿ ಮುಖ್ಯಗುರು ವಿಜಯಕುಮಾರ ಸಾತಪುತೆ ಮಾತನಾಡಿ, ಮಕ್ಕಳಲ್ಲಿ ವ್ಯಾವಹಾರಿಕ ಪ್ರಜ್ಞೆ ಬೆಳೆಸಲು ಹಾಗೂ ಗಣಿತ ಜ್ಞಾನ ಹೆಚ್ಚಿಸಲು ಪಠ್ಯೇತರ ಚಟುವಟಿಕೆಯಾಗಿ ಮಕ್ಕಳ ಸಂತೆ ಏರ್ಪಡಿಸಲಾಗುತ್ತದೆ ಎಂದರು.

ಹೊಲಗಳಲ್ಲಿ ಬೆಳೆದ ಬದನೆಕಾಯಿ, ಗೆಣಸು, ಬಾಳೆ, ಪೇರಲು, ಚಿಕ್ಕು, ನಿಂಬೆ, ಪಪ್ಪಾಯಿ, ಬೆಂಡೆ, ಹಿರೇಕಾಯಿ, ಅವರೆಕಾಯಿ ವಿವಿಧ ಸೊಪ್ಪು, ತರಕಾರಿ, ಹಣ್ಣುಗಳು ಹಾಗೂ ಮನೆಯಲ್ಲಿ ತಯಾರಿಸಿದ ಪಾನಿಪುರಿ, ಬೇಲ್​ಪುರಿ ಸೇರಿ ವಿವಿಧ ತಿಂಡಿ ತಿನಿಸುಗಳನ್ನು ಮಕ್ಕಳು ಶಾಲಾ ಸಂತೆಯಲ್ಲಿ ಮಾರಾಟ ಮಾಡಿದರು. ಶಿಕರು, ಪಾಲಕರು, ಎಸ್​ಡಿಎಂಸಿ ಸದಸ್ಯರು ಹಣ ನೀಡಿ ವಿದ್ಯಾರ್ಥಿಗಳಿಂದ ತರಕಾರಿ, ಹಣ್ಣು ಖರೀದಿಸುವ ಮೂಲಕ ಪ್ರೋತ್ಸಾಹಿಸಿದರು.

ಎಸ್​ಡಿಎಂಸಿ ಉಪಾಧ್ಯ ಪಾಂಡುರಂಗ ಬಗಲಿ, ಸದಸ್ಯರಾದ ನೀಲಕಂಠ ಬಿರಾದಾರ, ನಾಗಪ್ಪ ಕುಂಬಾರ, ಮಂಜುಳಾ ಉಪಾಧ್ಯೆ, ದೀಪಾ ಹಿರೇಮಠ, ರಮಾನಂದ ಕುಲಕರ್ಣಿ, ಗ್ರಾ.ಪಂ. ಸದಸ್ಯರಾದ ಬೀರಪ್ಪ ಸೋಲಂಕರ, ಸಿದ್ಧ್ದರಾಮ ಹತ್ತರಕಿ, ಗಣಪತಿ ಪಾಂಡ್ರೆ ಮಕ್ಕಳ ಸಂತೆಯಲ್ಲಿ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net