ಶಿಕ್ಷಣದಿಂದ ವಂಚಿತರಾಗಬೇಡಿ

Don't miss out on education
ಬಸವನಬಾಗೇವಾಡಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಮೆಟ್ರೀಕ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದ ನೂತನ ಕಟ್ಟಡಕ್ಕೆ ಪೂಜೆ ಸಲ್ಲಿಸಿ ಸಚಿವ ಶಿವಾನಂದ ಪಾಟೀಲ್​ ಮಾತನಾಡಿದರು.
Published on

ಬಸವನಬಾಗೇವಾಡಿ: ಶಿಣದಿಂದ ಯಾರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಹಲವು ಯೋಜನೆ ಜಾರಿಗೆ ತಂದಿದ್ದು. ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಮೆಟ್ರಿಕ್​ ನಂತರದ (ಪರಿಶಿಷ್ಟಜಾತಿ) ವಿದ್ಯಾರ್ಥಿನಿಯರ ವಸತಿ ನಿಲಯದ ನೂತನ ಕಟ್ಟಡದ ಪೂಜೆ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದ ಅವರು, 5.26 ಕೋಟಿ ರೂ.ವೆಚ್ಚ ದಲ್ಲಿ ಮಾದರಿಯ ಹಾಸ್ಟೆಲ್​ ನಿರ್ಮಾಣಗೊಂಡಿದೆ. ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ ಎಂದರು.

ಹಾಸ್ಟೆಲ್​ಗಳ ಕೋಣೆಗಳಲ್ಲಿ ಮಹಿಳಾ ಸಾಧಕಿಯರ ಭಾವಚಿತ್ರ ಅಳವಡಿಸಿದ್ದೀರಿ, ಆದರೆ ರಮಾಬಾಯಿ ಅಂಬೇಡ್ಕರ್​ ಅವರ ಭಾವಚಿತ್ರ ಯಾಕೆ ಹಾಕಿಲ್ಲ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ತಹಸೀಲ್ದಾರ್​ ಯಮನಪ್ಪ ಸೋಮನಕಟ್ಟಿ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮಂಜು ಹಿರೇಮನಿ, ಪುರಸಭೆ ಮುಖ್ಯಾಧಿಕಾರಿ ಎಚ್​. ಎಸ್​. ಚಿತ್ತರಗಿ, ಸಹಕಾರ ಮಹಾ ಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಸುರೇಶ ಹಾರಿವಾಳ, ಕೆಪಿಸಿಸಿ ಸದಸ್ಯ ಶೇಖರ ಗೊಳಸಂಗಿ, ಪಿಕೆಪಿಎಸ್​ ಬ್ಯಾಂಕಿನ ಉಪಾಧ್ಯ ಮಲ್ಲೇಶಿ ಕಡಕೋಳ, ಗ್ಯಾರಂಟಿ ಯೋಜನೆ ತಾಲೂಕಾಧ್ಯ ಮಹಿಬೂಬ ನಾಯಕೋಡಿ, ಅರವಿಂದ ಸಾಲವಾಡಗಿ, ಮಹಾಂತೇಶ ಸಾಸಾಬಾಳ ಉಪಸ್ಥಿತರಿದ್ದರು.

ಅಶೋಕ ನಡುವಿನಮನಿ ಸ್ವಾಗತಿಸಿದರು. ಎಮ್​ ಎಮ್​. ದಪ್ಪೇದಾರ ವಂದಿಸಿದರು. ವಿರೇಶ ಗುಡಲಮನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net