

ಚಡಚಣ: ಅಂದಾಜು 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಚಡಚಣ ಏತ ನಿರಾವರಿ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಶ್ರೀ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶಾಸಕ ವಿಠ್ಠಲ ಕಟಕಧೊಂಡ ಹೇಳಿದರು.
ಪಟ್ಟಣದಲ್ಲಿ ಅಂದಾಜು 50 ಲ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಪ್ರಾಥಮಿಕ ಶಾಲಾ ಶಿಕರ ಸೊಸೈಟಿಯ ನೂತನ ಕಟ್ಟಡಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೆರೆ ತುಂಬುವ ಯೋಜನೆ, ಅಮೃತ ಜಲ 0.2 ಯೋಜನೆ ಹಾಗೂ ಮತೇತ್ರದ ಎಲ್ಲ ಹಳ್ಳಿಗಳಿಗೂ ಉತ್ತಮ ರಸ್ತೆ ನಿರ್ಮಾಣಕ್ಕೆ ಸರ್ಕಾರ ಅಗತ್ಯ ಅನುದಾನ ಒದಗಿಸಲಿದೆ ಎಂದರು.
ಶಿಕರ ಸೊಸೈಟಿ ನಿರ್ದೇಶಕ ಗುರು ಜೇವೂರ ಪ್ರಾಸ್ತಾವಿಕವಾಗಿ ಮಾತನಾಡಿ, 15 ರೂ. ಬಂಡವಾಳದೊಂದಿಗೆ ಆರಂಭಗೊಂಡ ಈ ಪತ್ತಿನ ಸಂ ಇಂದು 25 ಕೋಟಿ ರೂ. ಬಂಡವಾಳ ಹೊಂದಿದೆ. ಶಿಕರು ಅರ್ಜಿ ಸಲ್ಲಿಸಿದ ಒಂದು ಗಂಟೆಯಲ್ಲೇ ಸಾಲ ನೀಡುವ ಮೂಲಕ ರಾಜ್ಯದಲ್ಲಿ ಮಾದರಿ ಸಂವಾಗಿ ಗುರುತಿಸಿಕೊಂಡಿದೆ ಎಂದರು.
ಕಾತ್ರಾಳ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಿದ್ಧೇಶ್ವರ ಶ್ರೀಗಳ ಆಶಯದಂತೆ ಚಡಚಣ ಭಾಗದ ನಿರಾವರಿ ಯೋಜನೆಗಳನ್ನು ಶಾಸಕರು ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು. ರಾಜಯೋಗಿನಿ ಬಿ.ಕೆ. ಶ್ರೀದೇವಿ ಅಕ್ಕ ಆಶೀರ್ವಚನ ನೀಡಿದರು.
ಸೊಸೈಟಿ ಅಧ್ಯಕ್ಷ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯ ಬಿ.ಎಸ್. ಮಜ್ಜಗಿ, ಕಾರ್ಯದರ್ಶಿ ಐ.ಎಂ. ಬೇದ್ರೆಕರ, ಪ್ರಾಥಮಿಕ ಶಾಲಾ ಶಿಕರ ಸಂದ ಅಧ್ಯ ಎ.ಎಸ್.ಸೊನಗಿ, ಕಾರ್ಯದರ್ಶಿ ವಿ.ಐ. ಕಾಂಬಳೆ, ಬಿಇಒ ಸುಜಾತಾ ಹುನೂರ, ಕಾಂತುಗೌಡ ಪಾಟೀಲ, ಡಾ.ವಿ.ಎಸ್. ಪತ್ತಾರ, ವಿ.ಜಿ. ಮುತ್ತಿನ, ದೇವೀಂದ್ರಪ್ಪ ಪಾಟೀಲ ಇದ್ದರು.