

ತಾಳಿಕೋಟೆ: ಪಟ್ಟಣದ ಅಂಬಾಭವಾನಿ ನೂತನ ಮಂದಿರ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಭಾನುವಾರ ಮತ್ತು ಸೋಮವಾರ ನಡೆಯಲಿದೆ.
ಬೆಳಗ್ಗೆ 10ಕ್ಕೆೆ ನೂತನ ಮೂರ್ತಿ ಮೆರವಣಿಗೆ ಕುಂಭಮೇಳ ಸೇರಿ ವಿವಿಧ ವಾದ್ಯಮೇಳಗಳೊಂದಿಗೆ ನಡೆಯಲಿದೆ. ಅಂಬಾಭವಾನಿ ದೇವಿಯ ಮೂರ್ತಿಯ ಜತೆ ರಾಮ, ಲಕ್ಷ$್ಮಣ, ಸೀತಾ, ಗಣೇಶ, ಮಹಾಲಕ್ಷಿ$್ಮ, ಆಂಜನೇಯ ದೇವರ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಸಂಜೆ ಮೂರ್ತಿಗಳ ಜಲವಾಸ, ಧ್ಯಾನ್ಯವಾಸ, ಶಯ್ಯಾದಿವಾಸ ನಡೆಯಲಿದೆ.
ಫೆ. 18 ರಂದು ಬೆಳಗ್ಗೆ 6ಕ್ಕೆ ಸಂತೋಷ ಭಟ್ಟ ಜೋಶಿ ನೇತೃತ್ವದಲ್ಲಿ ಪೂಜೆ ನಂತರ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಮಹಾ ಪ್ರಸಾದ ಜರುಗಲಿದೆ.
ಅಂದು ಬೆಳಗ್ಗೆ 10ಕ್ಕೆ ಧರ್ಮಸಭೆ ನಡೆಯಲಿದ್ದು, ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ಧ್ದಲಿಂಗ ದೇವರು ಸಾನ್ನಿಧ್ಯ ವಹಿಸುವರು. ವಿವಿಧ ಮಠಾಧೀಶರು ಉಪಸ್ಥಿತರಿರುವರು. ಶಾಸಕ ಅಪ್ಪಾಜಿ ನಾಡಗೌಡ ಉದ್ಘಾಟಿಸುವರು. ಗೋಂದಳಿ ಸಮಾಜದ ಅಧ್ಯ ವಿಠ್ಠಲ ಸೂರ್ಯವಂಶಿ, ರಾಜ್ಯಾಧ್ಯ ಕೆ. ಜಯರಾಮಯ್ಯ ಮೈಸೂರು ಉಪಸ್ಥಿತರಿರುವರು.