

ಬಸವನಬಾಗೇವಾಡಿ: ಅರ್ಹತೆ ಇದ್ದರೂ ಅವಕಾಶ ಕೈಕೊಟ್ಟಾಗ ಸ್ಥಾನಮಾನಗಳಿಂದ ಅನೇಕರು ವಂಚಿತರಾಗಿದ್ದಾರೆ. ಅರ್ಹತೆ ಇಲ್ಲದವರಿಗೆ ಅದೃಷ್ಟ ಖುಲಾಯಿಸಿದಾಗ ಸ್ಥಾನಮಾನ ದೊರತಿವೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಉಪ ವಿಭಾಗೀಯ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಸೇವೆಯಿಂದ ನಿವೃತ್ತರಾದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಜೆ.ವ್ಹಿ. ಕಿರಸೂರ ಅವರಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಬಸವನಬಾಗೇವಾಡಿ ೇತ್ರವು ಜಿಲ್ಲೆಯಲ್ಲಿ ಮುಂದುವರಿದ ೇತ್ರವಾಗಿಸಲು ಕಿರಸೂರಂಥ ಅಧಿಕಾರಿಗಳ ಸೇವೆ ಅಗತ್ಯವಿದೆ. ಸರ್ಕಾರಿ ಅಧಿಕಾರಿಗಳು ನಿವೃತ್ತರಾದ ಬಳಿಕವೂ ಸಮಾಜ ಸೇವೆ ಮಾಡಲು ಅವಕಾಶವಿರುತ್ತದೆ. ಅಂಥ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಧಿಕಾರವಧಿಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಜನರ ಮನಸ್ಸಿನಲ್ಲಿ ಹಚ್ಚು ಹಸಿರಾಗಿ ಉಳಿಯಲು ಸಾಧ್ಯ ಎಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ನಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಕೆಲಸ ಮಾಡಿದಾಗ ಮಾತ್ರ ಜನರು ನಮ್ಮನ್ನು ಪ್ರೀತಿ, ಗೌರವದಿಂದ ಕಾಣುತ್ತಾರೆ ಎಂದರು.
ಆಲಮಟ್ಟಿ ಅಣೆಕಟ್ಟು ವೃತ್ತ ಅಧೀಕ ಇಂಜನೀಯರ್ ವ್ಹಿ.ಆರ್. ಹಿರೇಗೌಡರ, ನಿವೃತ್ತ್ತ ಕಾರ್ಯನಿರ್ವಹಕ ಅಭಿಯಂತರ ಎಸ್.ಬಿ. ಪಾಟೀಲ, ತಾಂತ್ರಿಕ ಸಹಾಯಕ ಬಿ.ಬಿ. ಜಂಗಮಶೆಟ್ಟಿ, ಮಂಗಲಾ ಕಿರಸೂರ ಉಪಸ್ಥಿತರಿದ್ದರು.
ಸೋಮನಾಥ ಕೊಳಗೇರಿ ಪ್ರಾಸ್ತಾವಿಕ ಮಾತನಾಡಿದರು. ಜೆ.ಬಿ. ಕಲಬುರಗಿ ಸ್ವಾಗತಿಸಿದರು.