ಸ್ವಾತಂತ್ರೃ ಸಂಗ್ರಾಮದ ಧೀರ ನಾಯಕ ನೇತಾಜಿ

Netaji, the brave leader of the freedom struggle
ಬಂಡಿಗಣಿಯ ಸರ್ಕಾರಿ ಶಾಲೆಯಲ್ಲಿ ಸುಭಾಷಚಂದ್ರ ಬೋಸ್‌ರ ಜನ್ಮ ದಿನಾಚರಣೆ ನೆರವೇರಿತು. ಸಿದ್ದಲಿಂಗಯ್ಯ ರೂಡಲಬಂಡಿ, ಸಂಗಯ್ಯ ಕತ್ತಿ, ಬಸು ತೆಗ್ಗಿನವರ, ಬಸು ದೊಡಮನಿ ಮತ್ತಿತರರಿದ್ದಾರೆ.
Published on

ರಬಕವಿ/ಬನಹಟ್ಟಿ: ನೀವು ನನಗೆ ಒಂದು ಹನಿ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರೃ ಕೊಡುತ್ತೇನೆ ಎಂಬ ಘೋಷವಾಕ್ಯದೊಂದಿಗೆ ಭಾರತೀಯ ಸ್ವಾತಂತ್ರೃ ಸಂಗ್ರಾಮದಲ್ಲಿ ಬಿರುಗಾಳಿಎಬ್ಬಿಸಿದ ಧೀರ ನಾಯಕ ನೇತಾಜಿ ಎಂದು ವಿರುಪಾಕ್ಷಯ್ಯ ಮಠದ ಹೇಳಿದರು.

ಬಂಡಿಗಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಸುಭಾಷಚಂದ್ರ ಬೋಸ್‌ರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಜಗತ್ತಿನ ಮಹಾಪುರುಷರನ್ನು ದೈವ ಹಾಗೂ ನಿಸರ್ಗ ಹಲವಾರು ಬಾರಿ ಸತ್ವ ಪರೀಕ್ಷೆಗೊಳಪಡಿಸಿದೆ. ಇಂತಹ ಸತ್ವ ಪರೀಕ್ಷೆಗಳಿಗೆ ಮೈಯೊಡ್ಡಿ ಬಲಿಷ್ಠ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲಾಗಿ ನಿಂತವರಲ್ಲಿ ಸುಭಾಷಚಂದ್ರ ಬೋಸ್ ಅಗ್ರಜರು. ಅಂತವರ ಸ್ಮರಣೆ ಅಮೂಲ್ಯವಾಗಿದ್ದು, ಮಕ್ಕಳಿಗೆ ಇದನ್ನು ಮನವರಿಕೆ ಮಾಡುವ ಅಗತ್ಯವಿದೆ ಎಂದರು.

ಸಿದ್ದಲಿಂಗಯ್ಯ ರೂಡಲಬಂಡಿ, ಸಂಗಯ್ಯ ಕತ್ತಿ, ಬಸು ತೆಗ್ಗಿನವರ, ಬಸು ದೊಡಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net