ಗೃಹಲಕ್ಷ್ಮಿ ಹಣದಿಂದ ಸೂರು ಕಟ್ಟಿಕೊಂಡ ಗೃಹಿಣಿ

Housewife who built a roof with Grihalakshmi money
ಶಿರಾಡೋಣ ಗ್ರಾಮದಲ್ಲಿ ಗೃಹಲಕ್ಷ್ಮಿ ಹಣದಿಂದ ನಿರ್ಮಿಸಿದ ಮನೆ. ನೀಲಾಬಾಯಿ ಗಂಗಣ್ಣ ಪಾಂಡ್ರೆ ದಂಪತಿ ಇದ್ದಾರೆ.
Published on

ರೇವತಗಾಂವ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಇಲ್ಲ ಎಂದು ಟೀಕಿಸುವವರ ಮಧ್ಯೆಯೇ ಆ ಯೋಜನೆಯ ಹಣದಲ್ಲೇ ಬದುಕು ಕಟ್ಟಿಕೊಂಡವರ ನಿದರ್ಶನಗಳು ಹಲವಾರಿವೆ. ಶಿರಾಡೋಣ ಗ್ರಾಮದ ಮಹಿಳೆಯೊಬ್ಬಳು ಗ್ಯಾರಂಟಿ ಹಣದಲ್ಲೇ ಮನೆ ನಿರ್ಮಿಸಿಕೊಂಡು ಸರ್ಕಾರದ ಯೋಜನೆ ಮಹಿಮೆ ಏನು ಎಂಬುದಕ್ಕೆ ಸಾಕ್ಷಿಯಾಗಿದ್ದಾಳೆ.

ಗ್ರಾಮದ ನೀಲಾಬಾಯಿ ಗಂಗಣ್ಣ ಪಾಂಡ್ರೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 30ಸಾವಿರ ರೂ. ಜತೆಗೆ ಇನ್ನಷ್ಟು ಹಣ ಹೊಂದಿಸಿಕೊಂಡು 1ಲಕ್ಷ ರೂ. ವೆಚ್ಚದಲ್ಲಿ ಪತ್ರಾಸ್ ಮನೆ ನಿರ್ಮಿಸಿಕೊಂಡಿದ್ದಾರೆ. ಮನೆಗೆ ಗೃಹಲಕ್ಷ್ಮಿ ನಿಲಯ ಎಂದು ನಾಮಕರಣ ಮಾಡಿದ್ದು, ಜತೆಗೆ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಅಂಟಿಸಿ ಸಿದ್ದರಾಮಯ್ಯ ಕೃಪೆ ಎಂದು ಬರೆಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ನೀಲಾಬಾಯಿ ದಂಪತಿ, ನಿತ್ಯ ಕೂಲಿ ಮಾಡಿ ಬದುಕುವ ನಮಗೆ ಸ್ವಂತ ಸೂರು ಹೊಂದುವ ಕನಸಿತ್ತು. ಅದು ಇಂದು ಸರ್ಕಾರದ ಯೋಜನೆಯಿಂದ ನನಸಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net