ಸೇವೆ ಮೂಲಕ ನಾಲತವಾಡದ ಕೀರ್ತಿ ಹೆಚ್ಚಿಸಿ

Enhance the fame of Nalathwada through service
ನಾಲತವಾಡ ಪಟ್ಟಣದ ಡಾ.ಪ್ರಭುಗೌಡ ಲಿಂಗದಳ್ಳಿ ಅವರ ಅನುಗ್ರಹ ಕಣ್ಣಿನ ಆಸ್ಪತ್ರೆಯ ದಿ.ಎಸ್.ಬಿ.ಡೇರೇದ ಮೆಮೋರಿಯಲ್ ಅನುಗ್ರಹ ಪ್ರಾಥಮಿಕ ದೃಷ್ಟಿ ತಪಾಸಣಾ ಕೇಂದ್ರದ ನೂತನ ಶಾಖೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿದರು. ಸಿದ್ದಲಿಂಗ ಶಿವಾಚಾರ್ಯರು, ಡಾ.ಪ್ರಭುಗೌಡ ಲಿಂಗದಳ್ಳಿ, ಡಾ.ಮಾಲಿನಿ, ಡಾ.ಕರೇಕಲ್ ಮತ್ತಿತರರಿದ್ದಾರೆ.
Published on

ನಾಲತವಾಡ: ಅಂದರ ಬಾಳಿಗೆ ಬೆಳಕು ನೀಡುವ ಜತೆಗೆ ಪಟ್ಟಣದ ಕೀರ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯಿಟ್ಟಿರುವ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಶ್ರೇಯೋಭಿವೃದ್ಧಿಗೆ ಕೇವಲ ಸಾರ್ವಜನಿಕರಲ್ಲದೇ ಸ್ಥಳೀಯ ಪಟ್ಟಣ ಪಂಚಾಯತಿಯರವರೂ ಸಹ ಸಾಥ್ ನೀಡಬೇಕು ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ ಹೇಳಿದರು.

ಪಟ್ಟಣದಲ್ಲಿ ಡಾ.ಪ್ರಭುಗೌಡ ಲಿಂಗದಳ್ಳಿ ಅವರ ಅನುಗ್ರಹ ಕಣ್ಣಿನ ಆಸ್ಪತ್ರೆಯ ದಿ.ಎಸ್.ಬಿ.ಡೇರೇದ ಮೆಮೋರಿಯಲ್ ಅನುಗ್ರಹ ಪ್ರಾಥಮಿಕ ದೃಷ್ಟಿ ತಪಾಸಣಾ ಕೇಂದ್ರದ ನೂತನ ಶಾಖೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ಪ್ರಭುಗೌಡ ಅವರು ಪಟ್ಟಣದಲ್ಲಿ ಉಚಿತ ಕಣ್ಣಿನ ಹಾಗೂ ಮಲಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿದ್ದು, ನಾನೂ ಸಹ ಸರ್ಕಾರದ ಮಟ್ಟದಲ್ಲಿ ಸಹಾಯ ಮಾಡುತ್ತೇನೆ ಎಂದರು.

ಬಿಲ್‌ಕೆರೂರಿನ ಸಿದ್ದಲಿಂಗ ಶಿವಾಚಾರ್ಯರು ಆಸ್ಪತ್ರೆ ಪ್ರಾರಂಭದ ಪೂಜಾ ವಿಧಿವಿಧಾನ ಪೂರೈಸಿ ಆಶೀರ್ವಚನ ನೀಡಿದರು. ಡಾ.ಪ್ರಭುಗೌಡ ಲಿಂಗದಳ್ಳಿ, ಡಾ.ಮಾಲಿನಿ, ಡಾ.ಕರೇಕಲ್ ಮಾತನಾಡಿದರು.

ಬಿ.ಬಿ. ಪಾಟೀಲ ಚಬನೂರ, ಜಿಪಂ ಮಾಜಿ ಸದಸ್ಯ ಪ್ರಭು ಡೇರೇದ, ಶಂಕರರಾವ್ ದೇಶಮುಖ, ಜುಮ್ಮಣ್ಣ ಜೋಗಿ, ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್, ಬಸವರಾಜ ಗಂಗನಗೌಡ, ಎಂ.ಎಸ್. ಪಾಟೀಲ, ಅಮರಪ್ಪ ಗಂಗನಗೌಡ್ರ, ಶಿವಪ್ಪಗೌಡ ತಾತರಡ್ಡಿ, ಬಸವರಾಜ ತಾಳಿಕೋಟಿ, ಬಾಬು ಡೇರೇದ, ಬಸವರಾಜ ಡೇರೆದ, ಜಗದೀಶ ಡೇರೇದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net