ಲೋಕದ ಅಂಕುಡೊಂಕು ತಿದ್ದಿದ ಚೌಡಯ್ಯ

Chaudaiya who changed the twists and turns of the world
ವಿಜಯಪುರದ ಕಸಾಪ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ರಾಜುಗೌಡ ಕಳಸಗೊಂಡ (ಉತ್ನಾಳ), ಹಾಸಿಂಪೀರ ವಾಲಿಕಾರ, ಅರ್ಜುನ ಶಿರೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಅಂಬಿಗರ ಚೌಡಯ್ಯ ಅವರು ನೇರ, ನಿರ್ಭೀತವಾಗಿ ವಚನಗಳನ್ನು ರಚಿಸುವ ಮೂಲಕ ಲೋಕದ ಅಂಕುಡೊಂಕು ತಿದ್ದಿದವರು ಎಂದು ಹಿಟ್ಟಿನಹಳ್ಳಿ ಪಿಕೆಪಿಎಸ್​ ಮಾಜಿ ಅಧ್ಯಕ್ಷ ರಾಜುಗೌಡ ಕಳಸಗೊಂಡ (ಉತ್ನಾಳ) ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚೌಡಯ್ಯ ಅವರು ಸಾಮಾಜಿಕ ಕಂದಾಚಾರಗಳನ್ನು ಧಿಕ್ಕರಿಸಿ ವಚನಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಶ್ಲಾನೀಯ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕಂಡದ್ದನ್ನು ಕಂಡಂತೆ ಹೇಳುವ ವಚನಕಾರ ಅಂಬಿಗರ ಚೌಡಯ್ಯ. ವೈಚಾರಿಕತೆ, ಏಕದೇವೋಪಾಸನೆ, ಇಷ್ಟಲಿಂಗ ನಿಷ್ಠೆ, ನೈತಿಕ ಮೌಲ್ಯ ವಚನಗಳು, ಆಧ್ಯಾತ್ಮಿಕ ಹಾಗೂ ವಿಡಂಬನೆ ವಿಶೇಷತೆಗಳನ್ನು ನಿಜಶರಣರ ವಚನಗಳಲ್ಲಿ ಕಾಣಬಹುದು ಎಂದರು.

ರಾಜೇಸಾಬ ಶಿವನಗುತ್ತಿ, ಅರ್ಜುನ ಶಿರೂರ, ರವಿ ಬೆನಕಟ್ಟಿ, ದುಂಡಪ್ಪ ಬಗಲಿ, ಜಗನ್ನಾಥ ಚೌಧರಿ, ವಿಠಲ ಸಾರವಾಡ, ಮುದಸ್ಸರ ವಾಲಿಕಾರ, ಸುಭಾಷ ಯಂಭತ್ತನಾಳ, ಸಿದ್ರಾಮ ವಾಲಿಕಾರ, ಭೀಮನಗೌಡ ಬಿರಾದಾರ, ಮಹಮ್ಮದ್​ ವಾಲಿಕಾರ, ಸಂತೋಷ ಲಮಾಣಿ, ಹುಸೇನ ವಾಲಿಕಾರ, ಅಪ್ಪು ನಾಟೀಕಾರ, ಮಜರ ವಾಲಿಕಾರ, ಸತೀಶ ಚೌಧರಿ, ಸಿದ್ದನಗೌಡ ಬಿರಾದಾರ, ಸಂಗಮೇಶ ಕವಡಿಮಟ್ಟಿ, ಮಹಾಂತೇಶ ಪಡನಾಡ, ದಾನಪ್ಪ ಸಾಲಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net