ಯೋಗದಿಂದ ಆರೋಗ್ಯಕರ ಜೀವನ ಸಾಧ್ಯ

A healthy life is possible with yoga
ಬನಹಟ್ಟಿ ರವೀಂದ್ರ ಪತ್ತಾರ ಅವರ ಮನೆಯಲ್ಲಿ ತಾಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ಪುಸ್ತಕಾವಲೋಕನ -37 ಸಮಾರಂಭದಲ್ಲಿ ಹಾರೂಗೇರಿಯ ಶರಣ ಐ. ಆರ್. ಮಠಪತಿ ಶರಣ ಸಂಗಮ ಪುಸ್ತಕವನ್ನು ಅವಲೋಕಿಸಿದರು. ಮ. ಕೃ. ಮೇಗಾಡಿ, ರವೀಂದ್ರ ಪತ್ತಾರ ಇದ್ದಾರೆ.
Published on

ರಬಕವಿ/ಬನಹಟ್ಟಿ: ಯೋಗವು ನಿಮ್ಮ ಮನಸ್ಸು ಮತ್ತು ದೇಹವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಹಾರೂಗೇರಿಯ ಐ. ಆರ್. ಮಠಪತಿ ತಿಳಿಸಿದರು.

ಬನಹಟ್ಟಿಯ ರವೀಂದ್ರ ಪತ್ತಾರ ಅವರ ಮನೆಯಲ್ಲಿ ತಾಲೂಕು ಕಸಾಪ ವತಿಯಿಂದ ಭಾನುವಾರ ಸಂಜೆ ಆಯೋಜಿಸಲಾಗಿದ್ದ ಪುಸ್ತಕಾವಲೋಕನ-37 ಸಮಾರಂಭದಲ್ಲಿ ಶಿವಾನಂದ ದಾಶಾಳ ಬರೆದ ಶರಣ ಸಂಗಮ ಪುಸ್ತಕದ ಅವಲೋಕನ ಮಾಡಿ ಅವರು ಮಾತನಾಡಿದರು.

ಶರಣ ಸಂಗಮ ಪುಸ್ತಕ ಬಹಳ ಉಪಯುಕ್ತವಾಗಿದ್ದು, ಆಗಿನ ಕಾಲದ ಶರಣರು, ಇಂದಿನ ಕಾಲಘಟ್ಟದ ಜನರು ಹಾಗೂ ಯೋಗದ ಕುರಿತು ಆಳವಾಗಿ ವಿವರಿಸಲಾಗಿದೆ. ಯೋಗವು ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡುವುದರ ಜತೆಗೆ ಉತ್ತಮ ನಿದ್ರೆಗೆ ಸಹಕಾರಿಯಾಗುತ್ತದೆ. ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸಿನ ಗುರಿ ಹೊಂದಿರುವ ಜೀವನ ವಿಧಾನವೇ ಯೋಗ. ಆಯುರ್ವೇದದಲ್ಲಿ ತಿಳಿಸಿರುವಂತೆ ಮನುಷ್ಯನ ದೈಹಿಕ, ಮಾನಸಿಕ ಹಾಗೂ ಅಧ್ಯಾತ್ಮದ ನಡುವೆ ಸಮತೋಲನ ಅಭಿವೃದ್ಧಿಪಡಿಸಲು ಯೋಗ ಸಹಾಯ ಮಾಡುತ್ತದೆ. ಆದರೆ, ಏರೋಬಿಕ್ಸ್‌ನಂತಹ ಇತರ ವ್ಯಾಯಾಮಗಳು ದೈಹಿಕ ಯೋಗಕ್ಷೇಮಕ್ಕೆ ಮಾತ್ರ ಆದ್ಯತೆ ನೀಡುತ್ತವೆ. ಇವುಗಳು ಆಧ್ಯಾತ್ಮಿಕ ಹಾಗೂ ಆಸ್ಟ್ರಲ್ ದೇಹದ ಸುಧಾರಣೆಗೆ ಕಡಿಮೆ ಸಂಬಂಧ ಹೊಂದಿವೆ ಎಂದರು.

ಪುಸ್ತಕ ರಚನಾಕಾರ ಶಿವಾನಂದ ದಾಶಾಳ ಗುರುಗಳು ಮಾತನಾಡಿದರು. ಮೋಹನ ಪತ್ತಾರ ಅಧ್ಯಕ್ಷತೆ ವಹಿಸಿದ್ದರು.

ರವೀಂದ್ರ ಪತ್ತಾರ, ತಾಲೂಕು ಕಸಾಪ ಅಧ್ಯಕ್ಷ ಮ. ಕೃ. ಮೇಗಾಡಿ, ತೇರದಾಳ ಅಧ್ಯಕ್ಷ ಗಂಗಾಧರ ಮೋಪಗಾರ, ಶಿವಾನಂದ ಬಾಗಲಕೋಟಮಠ, ಜಯವಂತ ಕಾಡದೇವರ, ಮಹಾಲಿಂಗಪುರ ವಲಯ ಅಧ್ಯಕ್ಷ ಬಸವರಾಜ ಮೇಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net