

ಮೈಸೂರು: ಮೈಸೂರು ನಗರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತೀವ್ರಗತಿಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ರಂಗಾಯಣದ ವತಿಯಿಂದ ಭೂಮಿಗೀತ ರಂಗಮಂದಿರದಲ್ಲಿ ನಡೆಯುತ್ತಿರುವ ಪರ್ವ ನಾಟಕವನ್ನು ಮುಂದೂಡಲಾಗಿದೆ.
ಭೂಮಿಗೀತ ರಂಗಮಂದಿರದಲ್ಲಿ 200 ಆಸನಗಳ ವ್ಯವಸ್ಥೆಯಿದ್ದು, ಇದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಆಹ್ವಾನಿಸುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸೂಚಿಸಿರುವಂತೆ ಏಪ್ರಿಲ್ 20ರವರೆಗೆ ಪರ್ವ ನಾಟಕ ಪ್ರದರ್ಶನವನ್ನು ರದ್ದು ಪಡಿಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ತಿಳಿಸಿದ್ದಾರೆ.