ಮೈಸೂರಿನ ಯುವಕ ನಿರ್ಮಿಸಿದ ಸಾಕ್ಷ್ಯಚಿತ್ರ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವಕ್ಕೆ ಆಯ್ಕೆ

InShot_20201118_191705678
Published on

ಮೈಸೂರು: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದ ವಿಜ್ಞಾನ ಪ್ರಸಾರ ಸಂಸ್ಥೆ ಆಯೋಜಿಸಿರುವ 10ನೇ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವಕ್ಕೆ ನಗರದ ಎನ್.ಶಿವಮೂರ್ತಿ ನಿರ್ಮಿಸಿರುವ ‘ಬಯೋ ಡೈವರ್‌ಸಿಟಿ ಆಫ್ ತ್ರಿಪುರ’ ಕಿರು ಸಾಕ್ಷಾೃಚಿತ್ರ ಆಯ್ಕೆಗೊಂಡಿದೆ.

ಶಿವಮೂರ್ತಿ ನಿರ್ಮಿಸಿರುವ 8.28 ನಿಮಿಷದ ಈ ಸಾಕ್ಷೃಚಿತ್ರ ತ್ರಿಪುರದ ಜೀವ ವೈದ್ಯತೆ ಮೇಲೆ ಬೆಳಕು ಚೆಲ್ಲಿದೆ. ವಿಜ್ಞಾನ ಪ್ರಸಾರ ಸಂಸ್ಥೆಯು ತ್ರಿಪುರದ ಕೌನ್ಸಿಲ್ ಫಾರ್ ಸೈನ್ಸ್ ಅ್ಯಂಡ್ ಟೆಕ್ನಾಲಜಿ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವವನ್ನು ತ್ರಿಪುರದಲ್ಲಿ ನ.24 ರಿಂದ 27ರವರೆಗೆ ಹಮ್ಮಿಕೊಂಡಿದೆ.

ಮಾನಸಗಂಗೋತ್ರಿಯ ಎಂಆರ್‌ಇಒನ ಕಿರಿಯ ಸಂಶೋಧನಾ ಅಧಿಕಾರಿ ಆ್ಯರನ್ ಮಾರ್ಗದರ್ಶನದಲ್ಲಿ ಶಿವಮೂರ್ತಿ ಕಿರು ಸಾಕ್ಷಾೃಚಿತ್ರ ನಿರ್ಮಿಸಿದ್ದಾರೆ. ಶಿವಮೂರ್ತಿ ಅವರು 2016ರಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಇಎಂಎಂಆರ್‌ಸಿಯಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಕೋರ್ಸ್ ಪೂರೈಸಿದರು. ಇವರು ತಿ.ನರಸೀಪುರದ ಚಿಕ್ಕಲಕ್ಷ್ಮೀಪುರ ನಿವಾಸಿ ನಂಜಯ್ಯ-ಚಂದ್ರಮ್ಮ ದಂಪತಿ ಪುತ್ರ.

‘ಡೆಸ್ಟಿನೇಷನ್ ಆಫ್ ತ್ರಿಪುರ’ ವಿಭಾಗದ ಮೊದಲ ಮೂರು ಪಟ್ಟಿಯಲ್ಲಿ ‘ಬಯೋ ಡೈವರ್‌ಸಿಟಿ ಆಫ್ ತ್ರಿಪುರ’ ಕಿರು ಸಾಕ್ಷಾೃಚಿತ್ರ ಸ್ಥಾನ ಪಡೆದಿದೆ. ಮೊದಲ ಪ್ರಯತ್ನದಲ್ಲಿಯೇ ನಾನು ನಿರ್ಮಿಸಿದ ಸಾಕ್ಷಾೃಚಿತ್ರ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವಕ್ಕೆ ಅಯ್ಕೆಗೊಂಡಿರುವು ದು ಸಂತಸ ಉಂಟು ಮಾಡಿದೆ ಎಂದು ಎನ್.ಶಿವಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net