

ಮೈಸೂರು: ದೇಚಿ ಕ್ರಿಯೇಷನ್ಸ್ ವತಿಯಿಂದ ನಿರ್ಮಾಣಗೊಂಡಿರುವ ‘ಆಹನ’ ಕಿರುಚಿತ್ರ ನ.14 ರಂದು ‘ದೇಚಿ ಕ್ರಿಯೇಷನ್ಸ್’ ಯೂ ಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕರಾದ ದೇವರಾಜು ಪಿ.ಚಿಕ್ಕಹಳ್ಳಿ ಹೇಳಿದರು.
ಪಿ. ಶ್ರೇಯಸ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಚಿತ್ರದಲ್ಲಿ ಸಾಮಾಜಿಕ ಕಳಕಳಿಯ ಜತೆಗೆ, ಕೌಟುಂಬಿಕ ಮೌಲ್ಯ, ಪ್ರೀತಿಯನ್ನು ಕಾಣಬಹುದು. ಕುಟುಂಬಾಧಾರಿತ ಚಿತ್ರ ಇದಾಗಿರುವ ಹಿನ್ನೆಲೆಯಲ್ಲಿ ಕುಟುಂದವರೆಲ್ಲ ಒಟ್ಟುಗೂಡಿ ನೋಡಬಹುದು. ಸುಮಾರು ಎಂಟು ತಿಂಗಳವರೆಗೆ ಕಥೆ , ಚಿತ್ರಕಥೆ , ಸಂಭಾಷಣೆ ಮತ್ತು ಚಿತ್ರೀಕರಣ ಮಾಡಿ ಸ್ಟುಡಿಯೋ ಕೆಲಸಗಳು ಮುಗಿದು ಬಿಡುಗಡೆಗೆ ಉತ್ಸುಕವಾಗಿದೆ. ಇಲ್ಲಿ ಸುಮಾರು ನೂರಕ್ಕೂ ಅಧಿಕ ಮಂದಿ ದುಡಿದಿದ್ದಾರೆ . ಚಿತ್ರತಂಡ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಿರುಚಿತ್ರದ ನಿರ್ದೇಶಕ ಶ್ರೇಯಶ್ ಇತರರು ಇದ್ದರು.