

ಬೆಳಗಾವಿ: ಜನರಿಗೆ ವೈದ್ಯಕೀಯ ಸೇವೆಯಲ್ಲಿ ಹೊಸತನ ನೀಡುತ್ತಿರುವ ನಗರದ ಅರಿಹಂತ ಆಸ್ಪತ್ರೆಯು ಇದೀಗ ತಾಯಿ ನೀಡಿದ ಕಿಡ್ನಿಯನ್ನು ಮಗನಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗಿದೆ.
ಖಾನಾಪುರ ತಾಲೂಕಿನ ಗೋಲ್ಯಾಳಿ ಗ್ರಾಮದ ರಾಮದಾಸ ಕುಲಂ ಅವರು ಹಲವು ವರ್ಷಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದನು. ಈತನಿಗೆ ತಾಯಿ ಗುಣವಂತಿ ಕುಲಂ ಅವರು ಕಿಡ್ನಿಯನ್ನು ಅರಿಹಂತ ಆಸ್ಪತ್ರೆಯ ಯುರಾಲಾಜಿಸ್ಟ ಡಾ. ಅಮಿತ ಮುಂಗರವಾಡಿ, ಡಾ. ಶಿವಗೌಡಾ ಪಾಟೀಲ, ನೆಫ್ರಾಲಜಿಸ್ಟ್ ಡಾ. ವಿಜಯಕುಮಾರ ಪಾಟೀಲ ನೇತೃತ್ವದ ವೈದ್ಯ ತಂಡವು ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿದೆ.
ಧೈರ್ಯಶಾಲಿ ದಾನಿ ಗುಣವಂತಿ ಕುಲಂ ಅವರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಕಿಡ್ನಿಯನ್ನು ಮಗನಿಗೆ ದಾನ ಮಾಡಲು ನಿರ್ಧರಿಸಿದರು. ನಿಸ್ವಾರ್ಥತೆ ಮತ್ತು ತಾಯಿಯ ಪ್ರೀತಿಯನ್ನು ಪ್ರದರ್ಶಿಸಿದ ಅವರು, ತಮ್ಮ ಮಗನ ಯೋಗಕ್ಷೇಮಕ್ಕಾಗಿ ಅರ್ಪನಾ ಮನೋಭಾವದ ತಾಯಿಗೆ ಆಸ್ಪತ್ರೆಯು ವೈದ್ಯಕೀಯ ತಂಡ ಅಭಿನಂದಿಸಿದೆ.
--