ನಿವೃತ್ತಿ ಹೊಂದಿದ ಸಾರಿಗೆ ಸಿಬ್ಬಂದಿಗೆ ಸನ್ಮಾನ

15 CRP-2A
Published on

ಚನ್ನರಾಯಪಟ್ಟಣ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಅಂಬೇಡ್ಕರ್ ಜಯಂತಿ

ಚನ್ನರಾಯಪಟ್ಟಣ: ವಿಶ್ವಗುರು ಬಸವಣ್ಣನವರು 12 ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ತೊಡೆದು ಹಾಕಲು ಅಲ್ಲಮಪ್ರಭುಗಳ ನೇತೃತ್ವದಲ್ಲಿ

ಮಾಡಿದ ಹೋರಾಟದ ಪ್ರತಿ ರೂಪವೇ ಅಂಬೇಡ್ಕರ್ ಅವರ ಬದುಕಿನ ಕಳಕಳಿಯೂ ಆಗಿತ್ತು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಹೇಳಿದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚನ್ನರಾಯಪಟ್ಟಣ ಘಟಕದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂ ತಿ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ತಿಮ್ಮೇಗೌಡ ಮಾತನಾಡಿದರು. ಸಾರಿಗೆ ಸಂಸ್ಥೆ ಘಟಕದ ಪ್ರಭಾರ ವ್ಯವಸ್ಥಾಪಕ ನೂತನ್, ಎಟಿಎಸ್ ಪ್ರದೀಪ್, ಎಟಿಐ ಮಲ್ಲೇಶ ಇತರರು ಇದ್ದರು. ನಿವೃತ್ತಿ ಹೊಂದಿದ ಸಾರಿಗೆ ಸಿಬ್ಬಂದಿ ಜಗದೀಶ್, ಚಂದ್ರಶೇಖರ, ನಾಗರಾಜ್ ಮತ್ತು ಉಮೇಶ್ , ಬೋರೇಗೌಡ ಅವರಿಗೆ ಇದೇ ಸಂದರ್ಭ ಸನ್ಮಾನಿಸಿ ಬೀಳ್ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net