ನೀರಿನಲ್ಲಿ ಮುಳುಗಿ ಮೃತ

5blrp1
Published on

ಬೇಲೂರು: ಸ್ನಾನ ಮಾಡಲೆಂದು ಹೋಗಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆಸಗೋಡು ಸಮೀಪದ ವಾಟೇಹೊಳೆ ಜಲಾಶಯದ ಹಿನ್ನೀರಿನಲ್ಲಿ ಶನಿವಾರ ಸಂಜೆ ನಡೆದಿದೆ.
ಬಿಕ್ಕೋಡು ಹೋಬಳಿ ಕೆಸಗೋಡು ಗ್ರಾಮದ ಮನೆಯೊಂದಕ್ಕೆ ಟೈಲ್ಸ್ ಅಳವಡಿಸಲು ಆಗಮಿಸಿದ್ದ ಹಾವೇರಿ ಜಿಲ್ಲೆ ಲಕ್ಷ್ಮೇಶ್ವರದ ಕೂಲಿ ಕಾರ್ಮಿಕ ನಾಗರಾಜು (28) ಮೃತ. ಈತ ಸಹ ಕಾರ್ಮಿಕರೊಂದಿಗೆ ಜಲಾಶಯದ ಹಿನ್ನೀರಿನಲ್ಲಿ ಸ್ನಾನ ಮಾಡಲು ನೀರಿಗಿಳಿದ ಸಂದರ್ಭ ನೀರಿನಲ್ಲಿ ಮುಳುಗಿದ. ವಿಷಯ ತಿಳಿದ ಸ್ಥಳೀಯರು ಎಷ್ಟೇ ಹುಡುಕಾಡಿದರೂ ಮೃತದೇಹ ಪತ್ತೆಯಾಗಲಿಲ್ಲ. ಅಗ್ನಿಶಾಮಕ ದಳದ ಹಾಗೂ ಅರೇಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಸ್ಥಳಕ್ಕಾಗಮಿಸಿದ ಸಿಬ್ಬಂದಿ ಸಂಜೆ ವೇಳೆಗೆ ಮೃತದೇಹ ಪತ್ತೆ ಮಾಡಿತು. ನಂತರ ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಶವ ಹಸ್ತಾಂತರಿಸಲಾಯಿತು. ಕೆಲ ವರ್ಷಗಳಿಂದ ಈತ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಹಸೀಲ್ದಾರ್ ಎಂ.ಮಮತಾ. ಅಗ್ನಿಶಾಮಕ ದಳದ ಎಸ್.ಐ.ಜವರಯ್ಯ, ಕಂದಾಯ ನಿರೀಕ್ಷಕ ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net