ಸಕಲೇಶಪುರ ತಾಲೂಕಿನಲ್ಲಿ ವರ್ಷಧಾರೆ

Rainy weather
Rainy weather
Published on

ಮಳೆ ಅಬ್ಬರಕ್ಕೆ ಶಾಲೆಗಳಿಗೆ ರಜೆ *  ತುಂಬಿದ ಹಳ್ಳ- ಕೊಳ್ಳ- ನದಿ

ಸಕಲೇಶಪುರ : ತಾಲೂಕಿನಲ್ಲಿ ಆರಿದ್ರಾ ಮಳೆಯ ಅಬ್ಬರ ಮಂಗಳವಾರವೂ ಮುಂದುವರೆದಿತ್ತು.ಸೋಮವಾರ ಸಂಜೆಯಿಂದ ಬಿರುಸು ಪಡೆದಿರುವ ಮಳೆರಾಯನ ಉಪಟಳಕ್ಕೆ ಜನ ಜೀವನ ಅಸ್ತವ್ಯಸ್ತವಾಗಿತ್ತು. ಮಳೆಯಿಂದಾಗಿ ಹೇಮಾವತಿ ನದಿಯ ಒಡಲು ತುಂಬಿ ಹರಿಯುತ್ತಿದೆ. ತಾಲೂಕಿನ ಪ್ರಮುಖ ಹಳ್ಳ, ಕೊಳ್ಳಗಳೆಲ್ಲವೂ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದೆ. ದೊಡ್ಡತಪ್ಲೆ ಗ್ರಾಮ ಸಮೀಪದ ಹೆದ್ದಾರಿ ಸಮೀಪವಿರುವ ಗುಡ್ಡದಿಂದ ಭಾರೀ ಪ್ರಮಾಣದಲ್ಲಿ ಅಂತರ್ಜಲ ಉಕ್ಕಿ ಹೆದ್ದಾರಿಯ ಮೇಲೇಯೇ ಹರಿಯುತ್ತಿದೆ. ವಾಹನ ಸವಾರರ ಆತಂಕದಿಂದಲೇ ಸಂಚರಿಸುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಹೆದ್ದಾರಿಯಲ್ಲಿ ಗುಡ್ಡಗಳು ಯಾವ ಸಂದರ್ಭದಲ್ಲೂ ಬೇಕಾದರೂ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಮಳೆಯಿಂದಾಗಿ ತಾಲೂಕಿನಲ್ಲಿ ಚಳಿ ಹೆಚ್ಚಾಗಿದೆ.

ಜನರು ಮನೆಬಿಟ್ಟು ಹೊರಬಾರದ ಕಾರಣ ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರದ ರಸ್ತೆಗಳು, ವ್ಯಾಪಾರ- ವಹಿವಾಟು ಕೇಂದ್ರಗಳು ಬಿಕೋ ಎನ್ನುತ್ತಿದ್ದವು. ಭಾರೀ ಮಳೆ ಕಾರಣ ತಾಲೂಕಿನ ಶಾಲಾ, ಕಾಲೇಜುಗಳಿಗೆ ಮಂಗಳವಾರ ತಾಲೂಕು ಆಡಳಿತ ರಜೆ ಘೋಷಣೆ ಮಾಡಿತ್ತು. ಬುಧವಾರವೂ ಮೋಡ ಕವಿದ ವಾತಾವರಣ ಮತ್ತು ಮಳೆ ಮುಂದುವರಿಯುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net