ಹೈಕ ಹೋರಾಟಗಾರರ ರ್ನಿಲಕ್ಷ್ಯ ಸಲ್ಲ

HS Patil hydrabad karnataka protest koppal
Published on

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಸೌಲಭ್ಯ ಸಿಕ್ಕಿ 10 ವರ್ಷಗಳಾಗಿವೆ. ಈ ಸಂಭ್ರಮವನ್ನು ಜನೋತ್ಸವವಾಗಿ ಆಚರಿಸುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್​ ರ್ಖಗೆ ತಿಳಿಸಿದ್ದು ಸ್ವಾಗತಾರ್ಹ. ಆದರೆ, ಹೈಕ ಹೋರಾಟಕ್ಕೆ ಶ್ರಮಿಸಿದ ದಿ.ವೈಜನಾಥ ಪಾಟೀಲ್​, ಅವರ ಕುಟುಂಬಸ್ಥರು ಹಾಗೂ ಪ್ರಮುಖ ಹೋರಾಟಗಾರರನ್ನು ಉಪೇಸುವುದು ಸರಿಯಲ್ಲವೆಂದು ಕೊಪ್ಪಳ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಡಾ.ಎಚ್​.ಎಸ್​.ಪಾಟೀಲ್​, ಹೋರಾಟ ಸಮಿತಿ ಉಪಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ.

ಸೆ.17ಕ್ಕೆ 371(ಜೆ) ಜಾರಿಯಾಗಿ 10 ವರ್ಷ ಆಗಲಿದೆ. ದಶಮಾನೋತ್ಸವವನ್ನು ಜನೋತ್ಸವವಾಗಿ ಆಚರಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಇದಕ್ಕೆ ಪ್ರಮುಖ ಕಾರಣರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅವರನ್ನು ವಿಶೇಷವಾಗಿ ಸನ್ಮಾನಿಸುವುದಾಗಿ ತಿಳಿಸಿದ್ದಾರೆ. ಇದು ಸ್ವಾಗತಾರ್ಹ. ಆದರೆ, ವಿಶೇಷ ಸ್ಥಾನಮಾನಕ್ಕಾಗಿ ನಡೆದ ಕಾಲು ಶತಮಾನದ ಹೋರಾಟದಲ್ಲಿ ದಿವಗಂತ ವೈಜನಾಥ ಪಾಟೀಲ್​ ಕೊಡುಗೆ ಅಪಾರ. ರಾಜ್ಯ, ಕೇಂದ್ರ ಸರ್ಕಾರದ ರ್ನಿಲಕ್ಷ$್ಯ ಧೋರಣೆ ಖಂಡಿಸಿ 2002, 2003 ಮತ್ತು 2004ರಲ್ಲಿ ಹೈಕ ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯ ಧ್ವಜ ಹಾರಿಸಲು ಕರೆ ನೀಡಿದ್ದರು.

2005 ಮತ್ತು 2011ರಲ್ಲಿ ಕೊಪ್ಪಳದಿಂದ ಬೀದರ್​ವರೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಜಾಥಾ ಹಮ್ಮಿಕೊಂಡಿದ್ದರು. ಹೈಕ ಹೋರಾಟಗಾರರನ್ನು ದೆಹಲಿಯ ಜಂತರ್​ ಮಂತರ್​ಗೆ ಕರೆದೊಯ್ದು ಹೋರಾಟ ಮಾಡಿ ಕೇಂದ್ರದ ಗಮನ ಸೆಳೆದಿದ್ದರು. ಅಂಥ ಹೋರಾಟಗಾರ, ಅವರ ಸಂಗಡಿಗರನ್ನು ಉಪೇಸಬಾರದು. ಅವರ ಮಕ್ಕಳಾದ ಡಾ.ವಿಕ್ರಂ ಪಾಟೀಲ್​, ಗೌತಮ್​ ಪಾಟೀಲ್​ ಹಾಗೂ ಪ್ರಮುಖ ಹೋರಾಟಗಾರರನ್ನು ಗೌರವಿಸಿ ಸನ್ಮಾನಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net