ಹೃದಯಾಘಾತದಿಂದ ಯುವಕ ಮೃತ

26.npk-3
Published on

ನಾಪೋಕ್ಲು/ವಿರಾಜಪೇಟೆ : ವಿರಾಜಪೇಟೆ ಖಾಸಗಿ ಬಸ್ ನಿಲ್ದಾಣದ ಶೌಚಗೃಹದಲ್ಲಿ ಭಾನುವಾರ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನಾಪೋಕ್ಲು ಸಮೀಪದ ಕೊಳಕೇರಿ ನಿವಾಸಿ ಮಾಚಯ್ಯ ಅವರ ಪುತ್ರ ದಿನೇಶ್(38) ಮೃತ. ನಾಂಗಾಲ ಗ್ರಾಮದಲ್ಲಿರುವ ತಂಗಿ ಮನೆಗೆಂದು ಹೊರಟ್ಟಿದ್ದ ದಿನೇಶ್, ಶೌಚಗೃಹಕ್ಕೆ ತೆರಳಿದ್ದಾರೆ. ಅಲ್ಲಿ ಹೃದಯಾಘಾತಕ್ಕೊಳಗಾಗಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net