ಕೆಎಲ್​ಇ ಎಸ್​ಎಂಎಸ್​ಆರ್​ನಲ್ಲಿ ಮಾನವ ಸಂಪನ್ಮೂಲ ಸಮಾವೇಶ

SMSMR NEW
Published on

ಹುಬ್ಬಳ್ಳಿ : ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮತ್ತು ರಿಸರ್ಚ್ (ಎಸ್​ಎಂಎಸ್​ಆರ್ ) ಹಾಗೂ ನ್ಯಾಷನಲ್ ಇನ್ಸಿ ಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್ ಸಂಯೋಗದಲ್ಲಿ ‘ಮಾನವ ಸಂಪನ್ಮೂಲ ವೃತ್ತಿಯ ಭವಿಷ್ಯ’ ವಿಷಯ ಕುರಿತು ಮಾನವ ಸಂಪನ್ಮೂಲ ಸಮಾವೇಶವನ್ನು ಎಸ್​ಎಂಎಸ್​ಆರ್​ನಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಅತಿಥಿಯಾಗಿದ್ದ ವಿ ಆರ್​ಎಲ್ ಲಿಮಿಟೆಡ್​ನ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಎಸ್.ಜಿ. ಪಾಟೀಲ ಮಾತನಾಡಿ, ಮಾನವ ಸಂಪನ್ಮೂಲ ವ್ಯವಸ್ಥಾಪಕರ ಪಾತ್ರದ ಬಗ್ಗೆ ವಿವರಿಸಿದರು. ಸಮಾವೇಶದ ಮೊದಲನೇ ಭಾಗದಲ್ಲಿ ‘ಮಾನವ ಸಂಪನ್ಮೂಲ ವೃತ್ತಿ ಮತ್ತು ವೃತ್ತಿ ಅವಕಾಶಗಳಲ್ಲಿ ಪ್ರಸ್ತುತ ಪ್ರವೃತ್ತಿಗಳು’ ವಿಷಯ ಕುರಿತು ಸಂಡೂರು ಬಿಕೆಜಿ ಗ್ರುಪ್​ನ ಎಚ್​ಆರ್ ಪ್ರಧಾನ ವ್ಯವಸ್ಥಾಪಕ

ರಾಜಶೇಖರ ಬೆಲ್ಲದ ಮಾತನಾಡಿದರು.

‘ಉದೊ್ಯೕಗಿಗಳನ್ನು ನಿರ್ವಹಿಸಲು ಮಾನವ ಸಂಪನ್ಮೂಲ ವರ್ತನೆ ಕೌಶಲ್ಯಗಳು’ ವಿಷಯದ ಬಗ್ಗೆ ಕಲಬುರ್ಗಿ ಶ್ರೀ ಸಿಮೆಂಟ್​ನ ಉಪ ವ್ಯವಸ್ಥಾಪಕ ಸಂಗಯ್ಯ ಭಾಗೋಜಿಮಠ ಮಾತನಾಡಿದರು.

ಸಮಾವೇಶದ ಎರಡನೇ ಭಾಗದಲ್ಲಿ ‘ಸರ್ಕಾರಿ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲದ ಪಾತ್ರ’ ವಿಷಯ ಕುರಿತು ನಿವೃತ್ತ ಕೆಎಎಸ್ ಅಧಿಕಾರಿ ಶಂಕರಗೌಡ ಪಾಟೀಲ ಮಾತನಾಡಿದರು.

ಸಮಾವೇಶದ ಚರ್ಚಾ ಭಾಗದಲ್ಲಿ, ಚರ್ಚಾ ತಜ್ಞ ಸದಸ್ಯರು ಮಾನವ ಸಂಪನ್ಮೂಲ ವೃತ್ತಿ ಸಾಗುತ್ತಿರುವ ವಿಧಾನದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಕಾಮರ್ಸ್ ಮ್ಯಾನೇಜ್ಮೆಂಟ್ ಡೀನ್ ಡಾ. ಎಂ.ಆರ್. ಸೋಲ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶೈಕ್ಷಣಿಕ ಹಾಗೂ ಕೈಗಾರಿಕಾ ಪ್ರತಿನಿಧಿಗಳಾದ ಶಂಕರಗೌಡ ಪಾಟೀಲ, ಡಾ. ಜಿ.ಎಸ್. ಹಿರೇಮಠ, ಎಸ್.ಜಿ. ಪಾಟೀಲ, ವಿಜಯ ಸಾಯಿಗಲ್, ನಾಗರಾಜ ದಿವಟೆ, ಪ್ರಭುಲಿಂಗ ಕೊಪ್ಪದ ಹಾಗೂ ಇತರರು ಉಪಸ್ಥಿತರಿದ್ದರು.

ಸಮಾವೇಶದ ಕಾಯಾಧ್ಯಕ್ಷ ಡಾ.ಎನ್.ಎ. ಗೌಡರ್ ಸ್ವಾಗತಿಸಿದರು. ಡಾ. ರಂಜಿತಾ ಅಮ್ಮಿನಭಾವಿ ನಿರೂಪಿಸಿದರು. ಪ್ರೊ. ಕ್ರಿಸ್ಟಿನಾ ಆರ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net