ಮೈಸೂರಿನಲ್ಲಿ ನ.18ಕ್ಕೆ ಎಚ್‌ಆರ್ ಸಮಾವೇಶ

HR Dasara
Published on

ಮೈಸೂರು: ಮೈಸೂರು ಎಚ್‌ಆರ್ ಪೋರಂ ಹಾಗೂ ಎಡಿನ್ ಬ್ರಿಡ್ಜ್ ಫೌಂಡೇಷನ್ ವತಿಯಿಂದ ನ.18 ರಂದು ಮಧ್ಯಾಹ್ನ 2ಕ್ಕೆ ನಗರದ ನಾರ್ತ್ ಅವೆನ್ಯೂ (ಮೈಸೂರು ಸೋಸಿಯಲ್ಸ್)ನಲ್ಲಿ ‘ಪೆಂಟಗಾನ್ ಸ್ಪೇಸ್ ಎಚ್‌ಆರ್ ಮತ್ತು ಟಿಪಿಒ ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಎಂ. ಫಣೀಶ್ ತಿಳಿಸಿದರು.

ಸಮಾವೇಶದಲ್ಲಿ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆಯ ಸಾಧ್ಯತೆ, ಹೊಸ ಉದ್ಯೋಗಗಳ ಸೃಷ್ಟಿಯ ಕುರಿತು ಪ್ರಮುಖವಾಗಿ ಚರ್ಚೆ ನಡೆಯಲಿದೆ. ಹೆಚ್ಚು ಉದ್ಯೋಗ ನೀಡುವ ಕಂಪನಿಗಳ ಜತೆ ಚರ್ಚೆ ನಡೆಸಲಾಗುವುದು. ಸಮಾವೇಶದಲ್ಲಿ ಹಲವು ಕಂಪನಿಗಳ ಹಾಗೂ ವಿವಿಧ ಕಾಲೇಜುಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟಿಸಿಎಸ್ ಕಂಪನಿಯ ಮುಖ್ಯಸ್ಥ ಇ.ಎಸ್. ಚಕ್ರವರ್ತಿ, ಗ್ಲೋಬಲ್ ಸ್ಟ್ರಾಟೆಜಿಕ್ ಹೈರಿಂಗ್ ಸಂಸ್ಥೆಯ ಎಚ್‌ಆರ್ ಮುಖ್ಯಸ್ಥ ಪ್ರವೀಣ್ ಕಾಮತ್, ಕಲರ್ ಟೋನ್ ಟೆಕ್ಸ್ಟ್‌ಟೈಲ್ಸ್‌ನ ಎಚ್‌ಆರ್ ಮುಖ್ಯಸ್ಥ ಜಿ.ಬಿ. ಪ್ರಶಾಂತ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎಚ್.ಆರ್. ಪ್ರತಾಪ್, ಶಿವಸಾಗರ್, ಮ್ಯಾಥ್ಯೂ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net