ಗರ್ಭ ಕ್ಯಾನ್ಸರ್ ತಡೆಯಲು ಎಚ್‌ಪಿವಿ ಲಸಿಕೆ ಅವಶ್ಯಕ- ಮಾಲೀ ಪಾಟೀಲ್

raichur
raichur
Published on

ರಾಯಚೂರು ಮಹಿಳೆಯರಲ್ಲಿ ಹೆಚ್ಚುತ್ತಿರುವ ಗರ್ಭ ಕ್ಯಾನ್ಸರ್ ತಡೆಯಲು ಎಚ್‌ಪಿವಿ ಚುಚ್ಚುಮದ್ದು ಪಡೆಯಬೇಕಾಗಿದ್ದು, ಮುಂಜಾಗ್ರತೆಯಾಗಿ 9 ರಿಂದ 14 ವರ್ಷದ ಬಾಲಕಿಯಯರಿಗೆ ಎಚ್‌ಪಿವಿ ಲಸಿಕೆ ಹಾಕುವದು ಅವಶ್ಯಕವಾಗಿದೆ. ಬಡ ಮಕ್ಕಳಿಗೆ ಉಚಿತವಾಗಿ ಹಾಕಲು ದಾನಿಗಳು ಮುಂದೆ ಬರಬೇಕೆಂದು ಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷ ಡಾ.ವಿ.ವಿ.ಮಾಲೀ ಪಾಟೀಲ್ ಹೇಳಿದರು.

ನಗರದ ಎಫ್‌ಪಿಎ ಇಂಡಿಯಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಸಂಖ್ಯಾ ನಿಯಂತ್ರಣ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದ ಭಾರತೀಯ ಕುಟುಂಬ ಯೋಜನಾ ಸಂಘದ ನೂತನ ಕಚೇರಿಯಲ್ಲಿ ಉಚಿತವಾಗಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ಏಳು ಜನ ತಜ್ಞ ವೈದ್ಯರು ಸೇವೆ ಒದಗಿಸಲು ಮುಂದೆ ಬಂದಿದ್ದಾರೆ. ವೈದ್ಯರುಗಳಾದ ಡಾ.ಕೆ. ಎಸ್.ರಾಜಕುಮಾರಿ, ಡಾ.ಬಸನಗೌಡ.ಎಂ, ಡಾ.ವಿರುಪಾಕ್ಷರೆಡ್ಡಿ, ಡಾ.ಮಹಾಲಿಂಗಪ್ಪ.ಬಿ, ಡಾ.ವಿ.ಎ.ಮಾಲಿಪಾಟೀಲ್, ಡಾ.ನಿತೀಶ. ಪಿ ಪ್ರತಿ ತಿಂಗಳು, ಪ್ರತಿವಾರದ ಒಂದು ದಿನ ಆಸ್ಪತ್ರೆಗೆ ಆಗಮಿಸಿ ತಪಾಸಣೆ ನಡೆಸಲಿದ್ದಾರೆ. ಸಾರ್ವಜನಿಕರು ಸದುಪಯೋಗ ಪಡೆಯಬೇಕೆಂದರು.

ಮಹಿಳೆಯರಲ್ಲಿ ಹೆಚ್ಚುತ್ತಿರು ಗರ್ಭ ಕ್ಯಾನ್ಸರ್ ತಡೆಯಲು ಎಚ್‌ಪಿವಿ ಚುಚ್ಚುಮದ್ದು ಪಡೆಯುವದು ಅವಶ್ಯಕವಾಗಿದೆ. ಪ್ರತಿಶತ ಕ್ಯಾನ್ಸರ್ ತಡೆಯಲು ಸಹಕಾರಿಯಾಗಿರುವ ಎಚ್‌ಪಿವಿ ಚುಚ್ಚುಮದ್ದು ಪ್ರತಿ ಬಾಲಕಿಗೆ ಎರಡು ಡೋಸ್ ನೀಡಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಒಂದುಡೋಜ್‌ಗೆ 2 ಸಾವಿರ ರೂ. ಬೆಲೆಯಿದೆ. ಈಗಾಗಲೇ ರೋಟರಿ ಕ್ಲಬ್, ರೆಡ್ ಕ್ರಾಸ್ ಸೋಸೈಟಿ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿಯವರು ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದಾರೆ. ಮಕ್ಕಳಿಗೆ ಚುಚ್ಚಮದ್ದು ಉಚಿತವಾಗಿ ಸರ್ಕಾರ ಶಾಲಾ ಮಕ್ಕಳಿಗೆ ನೀಡಲು ಉದ್ದೇಶಿಸಲಾಗಿದೆ. ಆಸಕ್ತರು ಆರ್ಥಿಕ ನೆರವು ನೀಡಲು ಭಾರತೀಯ ಕುಟುಂಬ ಯೋಜನಾ ಸಂಘ ಸಂಪರ್ಕಿಸಬೇಕೆಂದು ಮನವಿ ಮಾಡಿದರು. ಆರ್ಥಿಕ ನೆರವು ನೀಡಿದಲ್ಲಿ ಕರ ವಿನಾಯ್ತಿ ದೊರಕುತ್ತದೆ .


ಕೇಂದ್ರ ಸರ್ಕಾರ ಉಚಿತವಾಗಿ ಚುಚ್ಚುಮದ್ದು ನೀಡುವ ಕುರಿತು ಚರ್ಚೆಯಲ್ಲಿದೆ. ಆದರೆ ಬಾಲಕಿಯರಿಗೆ ಮುಂಜಾಗ್ರತೆಯಾಗಿ ಚುಚ್ಚಮದ್ದು ಹಾಕಬೇಕಿರುವದರಿಂದ ಸ್ವಯಂ ಸೇವಾ ಸಂಸ್ಥೆಗಳು, ಉದ್ಯಮಿಗಳು, ನೆರವಿಗೆ ಧಾವಿಸಬೇಕೆಂದರು. ಪಾಲಕರ ಸಹಮತಿ ಪಡೆದು ಚುಚ್ಚಮದ್ದು ಹಾಕುವ ಅಭಿಯಾನ ನಡೆಸಲು ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಡಾ.ಮಹಾಲಿಂಗಪ್ಪ , ಅಲಿಯಾ ಖಾನಂ. ಡಾ.ರಾಜಕುಮಾರಿ, ಡಾ.ವಿರುಪಾಕ್ಷಿರೆಡ್ಡಿ, ಡಾ.ಇಂದರಚಂದ ಸಿಂಘಿ, ಡಾ.ಬಸನಗೌಡ.ಎಂ. ಇದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net