

ಹೂವಿನಹಡಗಲಿ: ಕನಕದಾಸರ ಬದುಕು ಇಂದಿಗೂ ಪ್ರಸ್ತುತ ಎಂದು ತಹಸೀಲ್ದಾರ್ ಕೆ.ಶರಣಮ್ಮ ಹೇಳಿದರು. ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕನಕದಾಸರು ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ರಚಿಸಿದ ಸಾಹಿತ್ಯದಲ್ಲಿ ಸಾಮಾಜಿಕ ಕಾಳಜಿ, ಭಕ್ತಿ, ಸಮಾಜದ ಅಂಕು-ಡೊಂಕು ತಿದ್ದಲು ಬೇಕಾದ ಅಂಶಗಳೆಲ್ಲವು ಅಡಕವಾಗಿವೆ. ಸಾಹಿತ್ಯದ ಮೂಲಕ ಅನೇಕ ಕೀರ್ತನೆಗಳನ್ನು ರಚಿಸಿ ಕೀರ್ತನಾ ಸಾಹಿತ್ಯದ ಅಶ್ವಿನಿ ದೇವತೆಯಾಗಿದ್ದಾರೆ. ಅವರು ನಡೆದ ದಾರಿ ಮತ್ತು ಅನುಸರಿದ ಮಾರ್ಗ ನಮಗೆ ಮಾರ್ಗದರ್ಶಕ ಎಂದರು. ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ ಮಾತನಾಡಿದರು. ನಿವೃತ್ತ ಉಪಪ್ರಾಚಾರ್ಯ ಹರಪನಹಳ್ಳಿ ಕೊಟ್ರಪ್ಪ ಮತ್ತು ಸಾಹಿತಿ ಡಾ.ಅಂಜನಾ ಕೃಷ್ಣಪ್ಪ ಉಪನ್ಯಾಸ ನೀಡಿದರು. ತಾ.ಪಂ ಇ.ಒ ಎಸ್.ಎಸ್.ಪ್ರಕಾಶ್, ತಹಸೀಲ್ದಾರ್ ರವಿಕೊರವರ, ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ಬಿಇಒ ಎಸ್.ಎನ್.ಹಳ್ಳಿಗುಡಿ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೊಸಕೆರೆ ಬೀರಪ್ಪ, ಪ್ರಾದೇಶಿಕ ಕುರುಬ ಸಮಾಜದ ನಿರ್ದೇಶಕ ಹನುಮಂತಪ್ಪ, ಚಲವಾದಿ ಸಮಾಜದ ಅಧ್ಯಕ್ಷ ಸಿ.ದ್ಯಾಮಪ್ಪ, ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಹೊನ್ನಪ್ಪನವರ್, ಗೌರವಾಧ್ಯಕ್ಷ ಯು.ಹನುಮಂತಪ್ಪ, ಕುರುಬ ಸಮಾಜದ ಮುಖಂಡರಾದ ವಿಶ್ವನಾಥ ಹಳ್ಳಿಗುಡಿ, ಕೆ.ಪ್ರಕಾಶ್, ಈ.ಟಿ.ಹನುಮೆಶ್, ಈಟಿ ಮಾಲತೇಶ್ ಇತರರಿದ್ದರು.