ಉತ್ತಮ ಸಾಧನೆ ಮಾಡಿದ್ದಾರೆ. ಒಟ್ಟು 51 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, 23 ಬಾಲಕಿಯರು ಎ+, 20 ಬಾಲಕಿಯರು ಎ, 6 ವಿದ್ಯಾರ್ಥಿನಿಯರು ಬಿ+ ಹಾಗೂ ಬಿ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಕೂಡ್ಲಿಗಿ: ತಾಲೂಕಿನ ಹಿರೇಹೆಗ್ಡಾಳ್ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ
ರಶ್ಮಿ ಆರಾಧ್ಯಮಠ (ಶೇ 98.72), ಯಶಸ್ವಿನಿ (ಶೇ 98.56) ಕ್ರಮವಾಗಿ ಶಾಲೆಯಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದಿದ್ದು, ಇತರೆ 8 ವಿದ್ಯಾರ್ಥಿನಿಯರು ಶೇ 95ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಶಾಲೆಯ ಪ್ರಾಚಾರ್ಯ ಕೆ. ನಾಗರಾಜ ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.