ಸಿಎಂ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ; ವಸತಿ ಸಚಿವ ಸೋಮಣ್ಣ ಗರಂ

V Somanna
Published on

ಬಂಕಾಪುರ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ 604 ಮನೆಗಳ ಕಾಮಗಾರಿ ವೀಕ್ಷಣೆ ಮಾಡಿದ ವಸತಿ ಸಚಿವ ವಿ.ಸೋಮಣ್ಣ ಕಳಪೆ ಕಾಮಗಾರಿ ಕಂಡು ಗರಂ ಆಗಿದ್ದರು. ಇದು ಮುಖ್ಯಮಂತ್ರಿಗಳ ಕ್ಷೇತ್ರ ಎಂದು ಎಚ್ಚರಿಸಿದ ಪ್ರಸಂಗ ಜರುಗಿತು.

ವಸತಿ ಯೋಜನೆ ಹಾಗೂ ಕೊಳಚೆ ನಿರ್ಮೂಲನ ಮಂಡಳಿಯ ಕಾಮಗಾರಿಗಳ ವೀಕ್ಷಣೆಗಾಗಿ ಪಟ್ಟಣಕ್ಕೆ ಆಗಮಿಸಿದ್ದ ಸೋಮಣ್ಣ ಕಳಪೆ ಕಾಮಗಾರಿ ಕಂಡು ಗರಂ ಆಗಿದ್ದರು. ರಸ್ತೆ, ವಿದ್ಯುತ್, ಚರಂಡಿ, ಕಿಡಕಿ, ಪೆಂಟಿಂಗ್, ಸೇರಿದಂತೆ ಕಟ್ಟಡ ನಿರ್ಮಾಣದಲ್ಲಿ ಕಳಪೆಯಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪೇಂಟ್ ಮಾಡುವ ಬದಲು ಸುಣ್ಣ ಹೊಡೆದಿದ್ದೀಯಾ ? ಹೀಗಿದ್ದರೆ ಇದು ಮೂರು ತಿಂಗಳಲ್ಲಿ ಕಿತ್ತು ಹೋಗುತ್ತದೆ. ನನಗೇನು ತಲೆ ಕೆಟ್ಟಿದೆಯಾ ? ನನ್ನ ತಲೆ ಗೊಬ್ಬರ ಅಂತಾ ಅಂದ್ಕೊಂಡಿದಿಯಾ ? ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸಚಿವ ಕ್ಲಾಸ್ ತೆಗೆದುಕೊಂಡರು. ಈ ಕೂಡಲೇ ಇದನ್ನೆಲ್ಲ ಸರಿಪಡಿಸುವಂತೆ ಆದೇಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net