ಶಿರಾದಲ್ಲಿ ವಸತಿರಹಿತರಿಗೆ ಜಿ+2 ಮಾದರಿ ಮನೆಗಳು

Sira_DC
Published on

ಶಿರಾ: ನಗರಸಭೆ ವ್ಯಾಪ್ತಿಯ ಕಲ್ಲುಕೋಟೆಯಲ್ಲಿ ಹೌಸಿಂಗ್​ ಫಾರ್​ ಆಲ್​ ಯೋಜನೆಯಡಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಜಿ+2 ಮಾದರಿ 1008 ಗುಂಪು ಮನೆಗಳನ್ನು ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದೆ. ಮೊದಲ ಹಂತದಲ್ಲಿ 252 ಮನೆಗಳು ನಿರ್ಮಾಣ ಕಾಮಗಾರಿ ಶ್ರೀ ಪೂರ್ಣಗೊಳ್ಳಲಿದ್ದು 3 ತಿಂಗಳಲ್ಲಿ ಅರ್ಹ ಲಾನುಭವಿಗಳಿಗೆ ಮನೆ ನೀಡಲಾಗುವುದು.

2019ರಲ್ಲಿ ಪ್ರಧಾನಮಂತ್ರಿ ಆಜಾಸ್​ ಯೋಜನೆ &ಹೌಸಿಂಗ್​ ಾರ್​ ಆಲ್​ ಅಡಿ ಜಿ+2 ಮಾದರಿಯಲ್ಲಿ 1008 ಮನೆಗಳನ್ನು 55 ಕೋ.ರೂ., ವೆಚ್ಚದಲ್ಲಿ ನಿರ್ಮಿಸುವ ಯೋಜನೆಯನ್ನು ನಗರಸಭೆಯ ಒಡೆತನದ 8 ಎಕರೆ ಜಾಗದಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿದೆ. ನಗರಸಭೆ ಗುರುತಿಸಿರುವ 17 ಕೊಳಚೆ ಪ್ರದೇಶಗಳಲ್ಲಿನ ವಸತಿರಹಿತರು ಹಾಗೂ ನಗರದ ಸೂರಿಲ್ಲದೆ ಇರುವ ಕಡುಬಡವರ ಅರ್ಹ ಲಾನುಭವಿಗಳಿಗೆ ನೀಡಲು ಗುಂಪು ಮನೆಗಳನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮನೆಗಳನ್ನು ನಿರ್ಮಿಸಿ ನಗರಸಭೆಗೆ ಹಸ್ತಾಂತರಿಸಲಾಗುವುದು.

1 ಮನೆಗೆ 5.16 ಲಕ್ಷ !: ಜಿ+2 ಮಾದರಿಯಲ್ಲಿ ಸಾವಿರಕ್ಕು ಹೆಚ್ಚು ಮನೆಗಳನ್ನು ನಿರ್ಮಿಸಲಾಗುತ್ತಿದ್ದು 1 ಮನೆ ನಿರ್ಮಾಣ ವೆಚ್ಚ 5.16 ಲಕ್ಷ ರೂ., ತಗುಲಲಿದೆ. ರಾಜ್ಯ ಸರ್ಕಾರ 2 ಲಕ್ಷ ರೂ., ಹಾಗೂ ಕೇಂದ್ರ ಸರ್ಕಾರದ ಪಾಲು 1.5 ಲಕ್ಷ ರೂ., ಇದ್ದು ಉಳಿದ ಹಣವನ್ನು ಅರ್ಹ ಬಡ ಲಾನುಭವಿಗಳು ತುಂಬಬೇಕಿದೆ. ಈಗಾಗಲೇ 541 ಮಂದಿ ಸ್ಲಂ ನಿವಾಸಿಗಳು ಹಾಗೂ ನಗರದ ವಸತಿರಹಿತರು ಭಾಗಶ@ ಹಣವನ್ನು ನಗರಸಭೆಗೆ ಪಾವತಿಸಿದ್ದು ಶಾಸಕರ ಅಧ್ಯಕ್ಷತೆಯ ಆಶ್ರಯ ಸಮಿತಿಯಲ್ಲಿ ಅರ್ಹ ಲಾನುಭವಿಗಳ ಆಯ್ಕೆ ಮಾಡಲಾಗುವುದು.

ಎಮ್ಮೇರಹಳ್ಳಿಯಲ್ಲು ಆಶ್ರಯ ನಿವೇಶನ ! ಶಿರಾ ನಗರದ ಆಶ್ರಯ ಬಡಾವಣೆಯಲ್ಲಿ ಸುಮಾರು 4000 ನಿವೇಶನಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಪರಿಶೀಲಿಸಿದರು. ಈ ವೇಳೆ ಶಿರಾ ನಗರದ ಕಲ್ಲುಕೋಟೆಯ ಸರ್ವೆ ನಂಬರ್​ 100ರ 20 ಎಕರೆ ಜಾಗದಲ್ಲಿ ನಿವೇಶನಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಮಾಹಿತಿ ನೀಡಿದರಲ್ಲದೆ, ತಾಲೂಕಿನ ಎಮ್ಮೇರಹಳ್ಳಿಯಲ್ಲಿ 90 ಎಕರೆ ಜಾಗದಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಈ ವೇಳೆ ನಗರಸಭೆ ಆಯುಕ್ತ ರುದ್ರೇಶ್​, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿ. ಯೋಗಾನಂದ ಮತ್ತಿತರರು ಇದ್ದರು. 55 ಕೋಟಿ ವೆಚ್ಚದ ಯೋಜನೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್​ ಯೋಜನೆ& ಹೌಸಿಂಗ್​ ಾರ್​ ಆಲ್​ ಅಡಿ 55 ಕೋಟಿ ರೂ., ವೆಚ್ಚದಲ್ಲಿ ಜಿ+2 ಮಾದರಿಯಲ್ಲಿ 1008 ಮನೆಯನ್ನು ನಿರ್ಮಿಸಲಾಗಿದ್ದು ರಾಜ್ಯ ಸರ್ಕಾರದ ಪಾಲು ಕೂಡ ಇದೆ. ಶಿರಾ ನಗರದಲ್ಲಿ ಗುರುತಿಸಿರುವ 17 ಸ್ಲಂಗಳಲ್ಲಿನ ವಸತಿರಹಿತರಲ್ಲದೆ, ನಗರದಲ್ಲಿನ ಸೂರು ಇಲ್ಲದೆ ಇರುವ ಅರ್ಹ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡಲಿದ್ದು ಶಾಸಕರ ಅಧ್ಯಕ್ಷತೆಯ ಆಶ್ರಯ ಸಮಿತಿ ಸಭೆಯಲ್ಲಿ ಅರ್ಹ ಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಹೌಸಿಂಗ್​ ಫಾರ್​ ಆಲ್​ ಯೋಜನೆಯಡಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ಜಿ+2 ಮಾದರಿಯ 1008 ಗುಂಪು ಮನೆಗಳನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿದ್ದು, ಈ ಪೈಕಿ 252 ಕಟ್ಟಡಗಳ ನಿಮಾರ್ಣ ಕಾಮಗಾರಿ ಪೂರ್ಣಗೊಂಡಿದೆ. ಸಿಸಿ ರಸ್ತೆ, ನೀರು ಸರಬರಾಜು ಸೇರಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಶುಭಕಲ್ಯಾಣ್​ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net