ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿಗೆ ಕಠಿಣ ಜೀವಾವಧಿ ಶಿಕ್ಷೆ-ಲಕ್ಷ ರೂಪಾಯಿ ದಂಡ

court
Published on

ವಿಜಯಪುರ: ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಗೃಹಿಣಿಗೆ ಇಲ್ಲಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಶಿವಲೀಲಾ ಸಂತೋಷಗೌಡ ಬಿರಾದಾರ ಶಿಕ್ಷೆಗೆ ಗುರಿಯಾದ ಗೃಹಣಿ. ಇವಳು ತನ್ನ ಗಂಡನ ಮನೆಯವರೊಂದಿಗೆ ಸುಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ತಕರಾರು ಮಾಡುತ್ತಾ ಬಂದಿದ್ದು, 2017 ಅ. 11 ರಂದು ಹತಾಷೆಗೊಂಡ ತನ್ನ ಇಬ್ಬರು ಮಕ್ಕಳಾದ ಸುಭಾಷಗೌಡ (2) ಹಾಗೂ ಶ್ರೇಯಾ (6ತಿಂಗಳು) ಇವರನ್ನು ತನ್ನ ಜಮೀನಿನಲ್ಲಿರುವ ಬಾವಿಯ ನೀರಿನಲ್ಲಿ ತಳ್ಳಿ ಕೊಲೆ ಮಾಡಿ ತಾನೂ ಸಹ ಅದೇ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು.

ಈ ಬಗ್ಗೆ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಶಂಕರಗೌಡ ಬಸನಗೌಡರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಮಧ್ವೇಷ ಡಬೇರ ಸಾಕ್ಷಿ-ಪುರಾವೆಗಳನ್ನು ಪರಿಶೀಲಿಸಿ ಜ. 6 ರಂದು ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಮಾಮನಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net