ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

27-GPT-5
Published on

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬಹಳ್ಳಿಯಲ್ಲಿ ಗಂಡನ ಮನೆಯವರ ಕಿರುಕುಳದಿಂದ ಬೇಸತ್ತ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರೇಮಾ(30) ಮೃತರು. ಕಬ್ಬಹಳ್ಳಿ ಗ್ರಾಮದಿಂದ ಹೆಗ್ಗಡದೇವನಕೋಟೆಯ ಪ್ರಸನ್ನ ಎಂಬುವರಿಗೆ ಮದುವೆ ಮಾಡಿಕೊಡಲಾಗಿದ್ದು, ದಪಂತಿಗೆ ಪುತ್ರ, ಪುತ್ರಿ ಇದ್ದಾರೆ. ಗಂಡನ ಮನೆಯಲ್ಲಿನ ಕಿರುಕುಳ ತಾಳಲಾರದೆ ಕೆಲವು ದಿನಗಳ ಹಿಂದೆ ತವರಿಗೆ ಬಂದಿದ್ದ ಪ್ರೇಮಾ, ಜೀವನದಲ್ಲಿ ಬೇಸರದಿಂದ ಸೋಮವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಸುಮಾ ತಂದೆ ನಾಗರಾಜು ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಸಿದ ಪೊಲೀಸರು, ಪ್ರೇಮಾಳ ಪತಿ ಪ್ರಸನ್ನ ಹಾಗೂ ಅತ್ತೆ ಸಾವಿತ್ರಮ್ಮ ಅವರನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net