ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ

Published on

ಮೈಸೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ತವರು ಮನೆಯಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು ತಾಲೂಕು ಬೆಳವಾಡಿಯ ಅಮೃತೇಶ್ವರನಗರದ ಲಕ್ಷ್ಮಮ್ಮ ಅವರ ಪುತ್ರಿ ಜೆ.ಶಿಲ್ಪಾ(22) ಮೃತೆ.
ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ಲಕ್ಷ್ಮಮ್ಮ ಅವರ ಪುತ್ರಿ ಶಿಲ್ಪಾ ಅವರನ್ನು ರಾಮನಗರ ಜಿಲ್ಲೆ ಹೊಸದೊಡ್ಡಿ ಗ್ರಾಮದ ಮಹೇಶ್ ಜೊತೆ 2021ರ ಏಪ್ರಿಲ್ 19ರಂದು 23 ಗ್ರಾಂ ಚಿನ್ನಾಭರಣ ನೀಡಿ ವಿವಾಹ ಮಾಡಿಕೊಡಲಾಗಿತ್ತು. ಮದುವೆ ಬಳಿಕವೂ ಗಂಡನಮನೆಯವರು ಚಿನ್ನಾಭರಣ, ಹಣಕ್ಕೆ ಒತ್ತಾಯ ಮಾಡುತ್ತಿದ್ದರೆನ್ನಲಾಗಿದೆ.
ಮಗುವಾದ ಬಳಿಕ ಬಾಣಂತನ ಮುಗಿಸಿ ಹೋಗುವಾಗಲೂ 20 ಗ್ರಾಂ ಚಿನ್ನಾಭರಣ ನೀಡಲಾಗಿತ್ತು ಎನ್ನಲಾಗಿದೆ. ಇನ್ನೂ ಹೆಚ್ಚಿನ ವರದಕ್ಷಿಣೆಗೆ ಒತ್ತಾಯ ಮಾಡಿದಾಗ ಶಿಲ್ಪಾ 15 ದಿನಗಳ ಹಿಂದೆ ತವರು ಸೇರಿದ್ದರು. ಸೋಮವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ ಸಂಬಂಧ ಪತಿ ಹಾಗೂ ಅತ್ತೆ ವಿರುದ್ಧ ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net