ಸಾಲ ಬಾಧೆಗೆ ಗೃಹಿಣಿ ಆತ್ಮಹತ್ಯೆ

suicide
Published on

ಹರಿಹರ: ವಿವಿಧ ಸಂಘಗಳಿಂದ ಪಡೆದಿದ್ದ ಸಾಲ ತೀರಿಸುವ ಬಗೆ ತಿಳಿಯದೆ ಗೃಹಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರದ ಕಾಳಿದಾಸ ನಗರದ ಅಬುಕಲಾಂ ಶಾಲೆ ಸಮೀಪದ ನಿವಾಸಿ ಇನಾಯತ್ ಪತ್ನಿ ಅಲ್ಮಾಸ್ ಬಾನು (27) ಮೃತ ಗೃಹಿಣಿ.

ವಿವಿಧ ಸಂಘಗಳಿಂದ 3 ಲಕ್ಷ ರೂ.ವರೆಗೆ ಸಾಲ ಪಡೆದಿದ್ದರು. ಬುಧವಾರ ಒಂದು ಸಂಘದ ವಾರದ ಸಭೆಯಲ್ಲಿ ಕಂತಿನ ಹಣ ಪಾವತಿ ಮಾಡಿದ್ದರು. ಮಾಸಿಕ ಕಂತು ಪಾವತಿ ಮಾಡುವ ಸಂಘದ ಸಭೆಗೆ ಇನ್ನೂ ಹಾಜರಾಗಿರಲಿಲ್ಲ ಎನ್ನಲಾಗಿದೆ.

ಪತಿ ದುಡಿಯಲು ಬೆಂಗಳೂರಿಗೆ ತೆರಳಿದ್ದರು. ಬುಧವಾರ ಮಧ್ಯಾಹ್ನ ಕೃತ್ಯ ಬೆಳಕಿಗೆ ಬಂದಿದೆ. 6 ವರ್ಷದ ಮಗಳು, 9 ವರ್ಷದ ಮಗ ಇದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net