ಕತ್ತು ಹಿಸುಕಿ ಗೃಹಿಣಿಯ ಬರ್ಬರ ಹತ್ಯೆ

Crime Logo
Published on

ಲಕ್ಷೇಶ್ವರ: ತಾಲೂಕಿನ ಸೂರಣಗಿ ಗ್ರಾಮದ ಬಯಲು ಬಸವಣ್ಣನ ದೇವಸ್ಥಾನದ ಹತ್ತಿರ ಏ. 23ರಂದು ಪತ್ತೆಯಾಗಿದ್ದ ಮಹಿಳೆಯೊಬ್ಬರ ಶವದ ಗುರುತು ಪತ್ತೆಯಾಗಿದ್ದು, ಕೊಲೆಗೈದು ಶವ ತಂದು ಎಸೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹ ಪತ್ತೆಯಾದಾಗ ಯಾವುದೇ ಗುರುತು ಸಿಕ್ಕಿರಲಿಲ್ಲ. ಈಗ ಗುರುತು ಸಿಕ್ಕಿದ್ದು ತಾಲೂಕಿನ ನೆಲೂಗಲ ಗ್ರಾಮದ ನಿವಾಸಿ ಲಕ್ಷ್ಮೀ ಆನಂದ ಇಂಗಳಗಿ (33) ಎಂದು ತಿಳಿದು ಬಂದಿದೆ.

ಪ್ರಕರಣದ ಜಾಡು ಹಿಡಿದು ತನಿಖೆ ಕೈಗೊಂಡ ಪೊಲೀಸರು ಕೊಲೆಯ ರಹಸ್ಯ ಬೇಧಿಸಿದ್ದಾರೆ. ಮೃತ ಮಹಿಳೆ ವಿವಾಹಿತೆಯಾಗಿದ್ದು, ಮೂವರು ಮಕ್ಕಳಿದ್ದಾರೆ.

ಗಂಡನೊಡನೆ ಜಗಳ ಮಾಡಿಕೊಂಡು ಮಕ್ಕಳನ್ನು ಸಾಕುವ ಸಲುವಾಗಿ ಮಂಗಳೂರಿಗೆ ಕೂಲಿ ಕೆಲಸ ಅರಸಿ ಹೋಗಿದ್ದರು. ಅಲ್ಲಿ ಶಿಗ್ಗಾಂವಿ ತಾಲೂಕು ಗೊಟಗೋಡಿ ಗ್ರಾಮದ ಸುನೀಲ ಅಶೋಕ ಮಲ್ಲಾರಿ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಕೆಲ ದಿನಗಳಲ್ಲಿಯೇ ಇಬ್ಬರ ನಡುವೆ ವಿರಸ ಉಂಟಾಗಿ, ಸುನೀಲ ಹಾಗೂ ಆತನ ಸಹಚರರು ಸೇರಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ಸೂರಣಗಿ ಗ್ರಾಮದ ಹತ್ತಿರ ಎಸೆದು ಪರಾರಿಯಾಗಿದ್ದಾರೆ.

ಈ ಬಗ್ಗೆ ಲಕ್ಷೆ್ಮೕಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net