

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ 10 ದಿನಗಳ ಕಾಲ ಆಯೋಜಿಸಿರುವ ಗೃಹಶೋಭೆ ಲಿವಿಂಗ್ ಸ್ಟೈಲ್ ವಸ್ತುಪ್ರದರ್ಶನ ಮತ್ತು ಕೇಕ್ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಮೇಯರ್ ಶಿವಕುಮಾರ್ ಹಾಗೂ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಪ್ರದರ್ಶನವನ್ನು ಉದ್ಘಾಟಿಸಿ, ಶುಭ ಕೋರಿದರು. ‘ಗೃಹಶೋಭೆ’ ವಸ್ತುಪ್ರದರ್ಶನ ಮಾಲೀಕ ಎಂ.ಎಸ್.ನಾಗಚಂದ್ರ, ಡಾಲ್ಫಿನ್ ಬೇಕರ್ಸ್ ವ್ಯವಸ್ಥಾಪಕ ಪಾಲುದಾರ ಮೊಹಮದ್ ನಿಜಾರ್ ಇತರರಿದ್ದರು.
ಪ್ರದರ್ಶನದಲ್ಲಿ 150ಕ್ಕೂ ಹೆಚ್ಚು ಮಳಿಗೆಗಳಿದ್ದು, ಕಡಿಮೆ ದರದಲ್ಲಿ ಗುಣಮಟ್ಟದ ಹಾಗೂ ಆಕರ್ಷಕ ವಿನ್ಯಾಸದ ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಆಟೋಮೊಬೈಲ್‌ಗಳು, ಪೇಂಟಿಂಗ್‌ಗಳು, ಕಾರ್ಪೆಟ್‌ಗಳು, ಮಾಡ್ಯುಲರ್ ಕಿಚನ್‌ಗಳಂತಹ ಬ್ರ್ಯಾಂಡೆಡ್ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ.
ದೊಡ್ಡ ರಿಯಾಯಿತಿ ಮತ್ತು ಆಶ್ಚರ್ಯಕರ ಉಡುಗೊರೆಗಳ ಜತೆಗೆ ವಿವಿಧ ಉತ್ಪನ್ನಗಳ ಮೇಲೆ ಆಕರ್ಷಕ ಕೊಡುಗೆಗಳು ಇವೆ. ಪ್ರತ್ಯೇಕ ಆಹಾರ ಮಳಿಗೆಗಳೂ ಇದ್ದು, ಆಹಾರ ಪ್ರಿಯರು ವೈವಿಧ್ಯಮಯ ಆಹಾರ ಸೇವಿಸಬಹುದಾಗಿದೆ.
ಮಕ್ಕಳನ್ನು ರಂಜಿಸುವ ಉದ್ದೇಶದಿಂದ ಸಾಕಷ್ಟು ಮನರಂಜನೆಗೆ ಆಟಿಕೆಗಳು ಇವೆ. ಸಣ್ಣ ಕಂಪನಿ ಉತ್ಪನ್ನಗಳಿಂದ ಆರಂಭವಾಗಿ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ ಇದೆ. ಪ್ರದರ್ಶನವು ಡಿ.25ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 11 ರಿಂದ ರಾತ್ರಿ 9ರವರೆಗೆ ಭಾಗಿಯಾಗಬಹುದಾಗಿದೆ.