ಧಾರಾಕಾರ ಮಳೆಗೆ ಧರೆಗುರುಳಿದ ಮನೆಗಳು

26HDK0004
ಎಚ್.ಡಿ.ಕೋಟೆ ತಾಲೂಕಿನ ಗೆಂಡತ್ತೂರು ಗ್ರಾಮದ ಶ್ರೀನಿವಾಸ್ ಅವರ ಮನೆಗೆ ಮಳೆ ನೀರು ನುಗ್ಗಿರುವುದು.
Published on

ಎಚ್.ಡಿ.ಕೋಟೆ: ತಾಲೂಕಿನಲ್ಲಿ ಎರಡು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಗೆ ಹಲವು ಮನೆಗಳು ಧರೆಗೆ ಉರುಳಿದ್ದು ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ.

ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆಂಡತ್ತೂರು ಗ್ರಾಮದಲ್ಲಿ ಶ್ರೀನಿವಾಸ್ ಎಂಬುವರ ವಾಸದ ಮನೆಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ಆಹಾರ ಪದಾರ್ಥಗಳೆಲ್ಲ ಸಂಪೂರ್ಣ ಹಾಳಾಗಿದೆ. ಮನೆಯೊಳಗೆ ಇಡಲಾಗಿದ್ದ ಪದಾರ್ಥಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ಹಾಳಾಗಿದೆ.
ಮನೆ ಮಾಲೀಕ ಮಾತನಾಡಿ, ನಾನು ಕೂಲಿ ಕೆಲಸ ಮಾಡಿಕೊಂಡು ಪತ್ನಿ, ಇಬ್ಬರು ಮಕ್ಕಳೊಂದಿಗೆ ಪುಟ್ಟದೊಂದು ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದು, ಎರಡು ದಿನದಿಂದ ಬಿದ್ದ ಧಾರಾಕಾರ ಮಳೆಯಿಂದ, ಮಳೆ ನೀರು ಮನೆಗೆ ನುಗ್ಗಿದೆ. ಈ ಸಂಬಂಧ ಎನ್.ಬೇಗೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಿಚಾರ ತಿಳಿಸಿದರೂ ಯಾರೂ ಸ್ಥಳಕ್ಕೆ ಬಾರದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿರುವವರಿಗೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net