

ಹೊನ್ನಾವರ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಗುರುವಾರ ನಿರಂತರವಾಗಿ ಸುರಿದ ಗಾಳಿ ಮಳೆಯಿಂದ ವಿವಿಧ ಭಾಗಗಳಲ್ಲಿ ಹಾನಿ ಸಂಭವಿಸಿದೆ.
ಬಳಕೂರಿನ ಮಠದಕೇರಿಯ ಧರ್ವಿು ಹನುಮಂತ ನಾಯ್ಕ ಅವರ ಮನೆಯ ಮುಂಭಾಗದ ಮೇಲ್ಛಾವಣಿ ಮಳೆ ಗಾಳಿಗೆ ಹಾನಿಯಾಗಿದೆ. ಪಟ್ಟಣದ ಸಾಲೆಹಿತ್ತಲ ಮಜರೆಯ ನಾಗರಾಜ ನೀಲಕಂಠ ನಾಯ್ಕ ಅವರ ವಾಸ್ತವ್ಯ ಮನೆಯ ಮೇಲೆ ಜೋರಾದ ಗಾಳಿ ಮಳೆಗೆ ತೆಂಗಿನ ಮರ ಮುರಿದು ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ. ಹಾನಿಯಾದ ಸ್ಥಳಗಳಿಗೆ ನೋಡಲ್ ಅಧಿಕಾರಿಗಳು, ಗ್ರಾಮ ಪಂಚಾಯತಿ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದಾಗಿ ತಾಲೂಕಿನಲ್ಲಿ ಹರಿಯುವ ಶರಾವತಿ, ಗುಂಡಬಾಳ ನದಿ ಹಾಗೂ ಬಡಗಣಿ ನದಿಗಳು ತುಂಬಿ ಹರಿಯುತ್ತಿದೆ. ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಗುರುವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು.